ಕರ್ನಾಟಕ

karnataka

bus-accident-averted-in-uttarkashi

ETV Bharat / videos

ರಸ್ತೆಯಿಂದ ಕಂದಕಕ್ಕೆ ಜಾರಿ ಅರ್ಧಕ್ಕೆ ನಿಂತ ಬಸ್, ಕೂದಲೆಳೆ ಅಂತರದಲ್ಲಿ ಯಾತ್ರಿಕರು ಪಾರು: ವಿಡಿಯೋ - ಬಸ್ ರಸ್ತೆಯಿಂದ ಕಂದಕಕ್ಕೆ ಜಾರಿ

By

Published : May 2, 2023, 4:43 PM IST

ಉತ್ತರಕಾಶಿ (ಉತ್ತರಾಖಂಡ):ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡ ದುರಂತವೊಂದು ತಪ್ಪಿದೆ. ಯಾತ್ರಿಕರ ಬಸ್​ವೊಂದು ಕಂದಕಕ್ಕೆ ಬೀಳುವುದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. 28 ಪ್ರಯಾಣಿಕರಿಂದ ತುಂಬಿದ್ದ ಬಸ್ ರಸ್ತೆಯಿಂದ ಕಂದಕಕ್ಕೆ ಜಾರಿ ಅರ್ಧಕ್ಕೆ ನಿಂತು ನೇತಾಡಿದೆ. ಇದರಿಂದ ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಜಸ್ಥಾನದಿಂದ ಯಮುನೋತ್ರಿಗೆ ಯಾತ್ರಿಕರನ್ನು ತುಂಬಿಕೊಂಡು ಬಸ್​ ಬರುತ್ತಿತ್ತು. ಈ ವೇಳೆ ದಾಬರ್‌ಕೋಟ್ ಮತ್ತು ಸಯನಚಟ್ಟಿ ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ ಬಸ್ ಮೊದಲು ದೊಡ್ಡ ಕಲ್ಲಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಕಂದಕದತ್ತ ಬಸ್​ ಜಾರಿದೆ. ಆದರೆ, ಪವಾಡವೆಂಬಂತೆ ಬಸ್ ರಸ್ತೆಯ ಮೇಲ್ಭಾಗದಲ್ಲಿ​ ನಿಂತುಕೊಂಡಿದೆ. ಇಲ್ಲವಾದಲ್ಲಿ ಭಾರಿ ದುರಂತ ಸಂಭವಿಸುತ್ತಿತ್ತು ಎಂದು ತಿಳಿದು ಬಂದಿದೆ.

ಬಸ್ ಕಂದಕಕ್ಕೆ ಜಾರಿ ನೇತಾಡುತ್ತಿದ್ದಂತೆಯೇ ಎಲ್ಲ ಪ್ರಯಾಣಿಕರು ಭಯದಲ್ಲಿ ಕೂಗಿದ್ದಾರೆ. ಎಲ್ಲರೂ ಸುರಕ್ಷಿತವಾಗಿ ಬಸ್​ನಿಂದ ಇಳಿದಿದ್ದಾರೆ. ಇದಾದ ಬಳಿಕ ಜೆಸಿಬಿ ಸಹಾಯದಿಂದ ಹಗ್ಗ ಕಟ್ಟಿ ಬಸ್​ಅನ್ನು ರಸ್ತೆಗೆ ಎಳೆಯಲಾಗಿದೆ. ಬಸ್​ ಮುಂಭಾಗ ಜಖಂಗೊಂಡಿದೆ ಎಂದು ಪ್ರಭಾರಿ ಇನ್ಸ್‌ಪೆಕ್ಟರ್ ಬಾರ್ಕೋಟ್ ಗಜೇಂದ್ರ ಬಹುಗುಣ ಹೇಳಿದ್ದಾರೆ.

ಇದನ್ನೂ ಓದಿ:ಸಂಬಲ್ಪುರದಲ್ಲಿ ಪಾಳುಬಾವಿಗೆ ಬಿದ್ದ ಮರಿ ಆನೆ ರಕ್ಷಣೆ.. ವಿಡಿಯೋ

ABOUT THE AUTHOR

...view details