ಕರ್ನಾಟಕ

karnataka

ಶಾಸಕ ಎಂಪಿ ರೇಣುಕಾಚಾರ್ಯ

ETV Bharat / videos

ಕಾಂಗ್ರೆಸ್​ನದ್ದು ಗ್ಯಾರಂಟಿ ಕಾರ್ಡ್ ಅಲ್ಲ ಬೋಗಸ್ ಕಾರ್ಡ್.. ನಿಮಗೆ ಕಾರ್ಡ್ ಕೊಟ್ರೆ ಬೆಂಕಿ ಹಚ್ಚಿ ಸುಟ್ಟು ಹಾಕಿ: ರೇಣುಕಾಚಾರ್ಯ - ಸಿಎಂ ಬಸವರಾಜ ಬೊಮ್ಮಾಯಿ

By

Published : Mar 17, 2023, 7:57 PM IST

ದಾವಣಗೆರೆ: ಕಾಂಗ್ರೆಸ್​ನ ಗ್ಯಾರಂಟಿ ಕಾರ್ಡ್ ಅಲ್ಲ, ಅದು ಬೋಗಸ್ ಕಾರ್ಡ್ ಎಂದು ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಕಾಂಗ್ರೆಸ್​ನ ಗ್ಯಾರಂಟಿ ಕಾರ್ಡ್​ ಕುರಿತು ವ್ಯಂಗ್ಯವಾಡಿದ್ದಾರೆ.  ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಜರುಗಿದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 10 ಕೆಜಿ ಉಚಿತ ಅಕ್ಕಿ ಕೊಡ್ತೀವಿ ಅಂತಾರೆ, ಆ ಅಕ್ಕಿ ಕೊಟ್ಟಿದ್ದು ನಮ್ಮ ಪ್ರಧಾನಿ ಮೋದಿ ಎಂದು ಸಿದ್ದರಾಮಯ್ಯನಗೆ ರೇಣುಕಾಚಾರ್ಯ ಟಾಂಗ್ ನೀಡಿದರು. 

ಇನ್ನು ಸಿಎಂ ಬೊಮ್ಮಾಯಿ ಅವರು ವಿದ್ಯಾನಿಧಿ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಕೊಟ್ರು, ಕಾಂಗ್ರೆಸ್​ನವರು ಎರಡು ಸಾವಿರ ಕೊಡ್ತೀವಿ ಅಂತಾರೆ, ಅದು ಪೊಳ್ಳು ಭರವಸೆ. ಕಾಂಗ್ರೆಸ್​ನವರು ಗ್ಯಾರಂಟಿ ಕಾರ್ಡ್ ಕೊಟ್ರೆ ಆ ಕಾರ್ಡ್​ನ್ನು ಕಿತ್ತು ಎಸೆಯಿರಿ, ಅವರು ಯಾರ್ ಗ್ಯಾರಂಟಿ ಕಾರ್ಡ್ ಕೊಡ್ತಾರಲ್ಲ, ಆ ಕಾರ್ಡ್​ನಲ್ಲಿ ಒಂದೆಡೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್, ಮತ್ತೊಂದು ಕಡೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಹಿ ಇದೆ. ಇದರಲ್ಲೇ ಎರಡು ಸಹಿ. ಅವರು ಕೊಡುವ ಕಾರ್ಡ್ ಗ್ಯಾರಂಟಿ ಕಾರ್ಡ್ ಅಲ್ವೇ ಅಲ್ಲ. ಅದೊಂದು ಬೋಗಸ್ ಕಾರ್ಡ್, ಅದನ್ನು ನಿಮಗೆ ಕೊಟ್ರೆ ಅದಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿ ಎಂದು ಶಾಸಕರು ಕರೆ ನೀಡಿದರು.

ಇನ್ನೂ 2023 ರ ಚುನಾವಣೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ ಸೂಚಿಸಿದರೆ ಮಾತ್ರ ನಾನು ಚುನಾವಣೆಗೆ ಸ್ಪರ್ಧೆ ಮಾಡುವೆ, ಇಲ್ಲ ಅಂದರೆ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದೂ ಇದೇ ವೇಳೆ ರೇಣುಕಾಚಾರ್ಯ ಹೇಳಿದರು.

ಇದನ್ನೂ ನೋಡಿ:ದೇಶದಲ್ಲಿ ಕಾಂಗ್ರೆಸಿಗರು ವಿನಾಶದ ಕೆಲಸ ಮಾಡುತ್ತಿದ್ದಾರೆ: ಮಧ್ಯಪ್ರದೇಶದ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌

ABOUT THE AUTHOR

...view details