ಶಾಲೆಗೆ ತೆರಳುತ್ತಿದ್ದ 8 ವರ್ಷದ ಬಾಲಕಿ ಮೇಲೆ ಗೂಳಿ ದಾಳಿ: ಇಲ್ಲಿದೆ ವಿಡಿಯೋ - ಈಟಿವಿ ಭಾರತ ವೈರಲ್ ವಿಡಿಯೋ
Published : Sep 6, 2023, 7:01 PM IST
ನವದೆಹಲಿ:ಶಾಲೆಗೆ ಹೋಗುತ್ತಿದ್ದ 8 ವರ್ಷದ ಬಾಲಕಿ ಮೇಲೆ ಗೂಳಿ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಗ್ರೇಟರ್ ನೋಯ್ಡಾದ ದಂಕೌರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಪಾಲಿಕೆ ಜಾಗೃತೆ ವಹಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ. ಪಕ್ಕದ ಗಾಜಿಯಾಬಾದ್ನಲ್ಲಿ ನಾಯಿ ದಾಳಿಗೆ ಮಗು ಸಾವನ್ನಪ್ಪಿದ ಘಟನೆ ನಡೆದು 24 ಗಂಟೆ ಕಳೆಯುವಷ್ಟರಲ್ಲೇ ಗೂಳಿ ದಾಳಿ ಬೆಳಕಿಗೆ ಬಂದಿದೆ.
ದಾಳಿಯಲ್ಲಿ ಬಾಲಕಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆಯ ನಂತರ ಪಾಲಕರಲ್ಲಿ ಆತಂಕ ಎದುರಾಗಿದ್ದು ಮಕ್ಕಳನ್ನು ಹೊರಗಡೆ ಕಳುಹಿಸಲು ಯೋಚಿಸುವಂತಾಗಿದೆ. ಈ ಹಿಂದೆ ನೋಯ್ಡಾದ ಸೆಕ್ಟರ್ 39 ಪೊಲೀಸ್ ಠಾಣೆ ವ್ಯಾಪ್ತಿಯ ಸೆಕ್ಟರ್ ಅಪಾರ್ಟ್‌ಮೆಂಟ್ ಬಳಿ ಮಗುವೊಂದರ ಮೇಲೆ ನಾಯಿಗಳು ದಾಳಿ ನಡೆಸಿ ಕೊಂದು ಹಾಕಿದ್ದವು. ಇದಕ್ಕೂ ಮುನ್ನ ಗ್ರೇಟರ್ ನೋಯ್ಡಾದ ದಾದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೂಳಿಯೊಂದು ಸೈಕಲ್ ಮೇಲೆ ಹೋಗುತ್ತಿದ್ದ ಪಾದಚಾರಿಯೊಬ್ಬನ ಮೇಲೆ ದಾಳಿ ಮಾಡಿತ್ತು, ಸೈಕಲ್ ಸವಾರ ಗಾಯಗೊಂಡಿದ್ದ.
ಇದನ್ನೂ ಓದಿ: ಅರಿವಳಿಕೆ ಮದ್ದು ನೀಡಲೆಂದು ತೆರಳಿದಾಗ ದಾಳಿ ಮಾಡಿದ ಕಾಡಾನೆ: ಅರಣ್ಯ ಸಿಬ್ಬಂದಿ ಸಾವು