ಸೈಕಲ್ ಸವಾರಿ ಮಾಡುತ್ತಿದ್ದ ಬಾಲಕನಿಗೆ ಗುದ್ದಿದ ಗೂಳಿ: ಸಿಸಿ ಕ್ಯಾಮರಾದಲ್ಲಿ ವಿಡಿಯೋ ಸೆರೆ - ಗೂಳಿ ದಾಳಿಗೊಳಗಾದ ಬಾಲಕ
ಸೈಕಲ್ ಸವಾರಿ ಮಾಡುತ್ತಿದ್ದ ಏಳು ವರ್ಷದ ಬಾಲಕನೊಬ್ಬನ ಮೇಲೆ ಗೂಳಿಯೊಂದು ದಾಳಿ ನಡೆಸಿದ ಘಟನೆ ಶಿವಮೊಗ್ಗ ನಗರದ ಗೋಪಿಶೆಟ್ಟಿಕೊಪ್ಪದಲ್ಲಿ ಸೋಮವಾರ ಸಂಜೆ ನಡೆದಿದೆ. ಇದರ ದೃಶ್ಯಾವಳಿ ಸಮೀಪದ ಸಿಸಿಟಿವಿ ಕ್ಯಾಮರಾವೊಂದರಲ್ಲಿ ಸೆರೆಯಾಗಿದೆ. ಸ್ಥಳೀಯ ನಿವಾಸಿ ಸನತ್ (7) ಗೂಳಿ ದಾಳಿಗೊಳಗಾದ ಬಾಲಕ. ಈತ ಮನೆ ಸಮೀಪದ ಅಂಗಡಿಗೆ ಸೈಕಲ್ನಲ್ಲಿ ತೆರಳಿ ಹಾಲು ತರುತ್ತಿದ್ದ ವೇಳೆ ರಸ್ತೆ ಬದಿಯಲ್ಲಿದ್ದ ಬಿಡಾಡಿ ಗೂಳಿ ಏಕಾಏಕಿ ದಾಳಿ ಮಾಡಿದೆ.
ಸನತ್ನನ್ನು ಕೊಂಬಿನಿಂದ ಎತ್ತಿ ಬಿಸಾಕಿ ತಿವಿದಿದೆ. ತಕ್ಷಣ ಸ್ಥಳೀಯರು ಬಾಲಕನನ್ನು ಗೂಳಿಯಿಂದ ರಕ್ಷಿಸಿದ್ದಾರೆ. ಬಾಲಕನಿಗೆ ತಲೆ, ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಡಾಡಿದನಗಳು, ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
ಇದನ್ನು ಓದಿ:ದೇವಾಲಯದಲ್ಲಿ ಅರ್ಚಕರ ಹೊಡೆದಾಟ: ಸಿಸಿಟಿವಿಯಲ್ಲಿ ದೃಶ್ಯ ಸೆರೆ