ಗೌರಿಕೆರೆ ಮಠದಲ್ಲಿ ವಿಚಿತ್ರ ಕರುವಿಗೆ ಜನ್ಮ ನೀಡಿದ ಎಮ್ಮೆ.. ವಿಡಿಯೋ ನೋಡಿ - ವಿಚಿತ್ರ ಕರುವಿಗೆ ಜನ್ಮ
ಶಿವಮೊಗ್ಗ: ಸೊರಬ ಪುರಸಭೆ ವ್ಯಾಪ್ತಿಯ ಹಳೇ ಸೊರಬ ಸಮೀಪದ ಗೌರಿಕೆರೆ ಮಠದಲ್ಲಿ ಎಮ್ಮೆಯೊಂದು ವಿಚಿತ್ರ ಕರುವಿಗೆ ಜನ್ಮ ನೀಡಿದೆ. ಮಹೇಂದ್ರಸ್ವಾಮಿ ಎಂಬುವರಿಗೆ ಸೇರಿದ ಎಮ್ಮೆ ಶನಿವಾರ ಬೆಳಗಿನ ಜಾವ ಗಂಡು ಕರುವಿಗೆ ಜನ್ಮ ನೀಡಿದ್ದು, ಕಣ್ಣುಗಳು ಮತ್ತು ಗೊರಸು ಇಲ್ಲದೇ ಬಾಯಿಯ ಮೂಲಕವೇ ಉಸಿರಾಡುತ್ತಿದೆ. ದೇಹ ಸಾಮಾನ್ಯ ಸ್ಥಿತಿಯಲ್ಲಿದ್ದರೂ ಮೇಲೆ ಏಳಲು ಸಾಧ್ಯವಾಗದೇ ಒದ್ದಾಡುತ್ತಿದೆ. ಇದು ಎಮ್ಮೆಗೆ ಜನಿಸಿದ ಆರನೇ ಕರುವಾಗಿದ್ದು, ಐದು ಕರುಗಳು ಸಾಮಾನ್ಯವಾಗಿ ಜನಿಸಿದ್ದವು. ಆದರೆ, ಆರನೇ ಕರುವು ವಿಚಿತ್ರವಾಗಿ ಜನಿಸಿದೆ. ವೈದ್ಯರನ್ನು ಸಂಪರ್ಕಿಸಿದಾಗ ಕರು ಹೆಚ್ಚು ಕಾಲ ಬದುಕುವುದಿಲ್ಲ ಎಂದಿದ್ದಾರೆ ಎನ್ನುತ್ತಾರೆ ಎಮ್ಮೆಯ ಮಾಲೀಕ ಮಹೇಂದ್ರ ಸ್ವಾಮಿ.
Last Updated : Feb 3, 2023, 8:27 PM IST