ಕರ್ನಾಟಕ

karnataka

ರಾಜಕೀಯ ಜೀವನ ಆರಂಭಿಸಿದ ಅಂಬಾಸಿಡರ್​ ಕಾರು ಮತ್ತೊಮ್ಮೆ ಏರಿದ ಬಿಎಸ್​ವೈ

ETV Bharat / videos

ರಾಜಕೀಯ ಜೀವನ ಆರಂಭಿಸಿದ ಅಂಬಾಸಿಡರ್​ ಕಾರನ್ನ ಮತ್ತೊಮ್ಮೆ ಏರಿದ ಬಿಎಸ್​ವೈ.. ಏನಿದರ ವಿಶೇಷತೆ? - ಹಿರಿಯ ಪುತ್ರ ರಾಘವೇಂದ್ರ

By

Published : Apr 20, 2023, 7:40 PM IST

ಶಿವಮೊಗ್ಗ:ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ತಾವು ರಾಜಕೀಯ ಜೀವನ ಆರಂಭಿಸಿದ ಅಂಬಾಸಿಡರ್ ಸಿಕೆಆರ್ 45 ಕಾರನ್ನು ಮತ್ತೊಮ್ಮೆ ಏರಿದ್ದಾರೆ. ರಾಜಕೀಯದ ಪ್ರಾರಂಭದ ದಿನಗಳಲ್ಲಿ ಬಳಸಿದ್ದ ಕಾರನ್ನು ಬಿಎಸ್​​ವೈ ಅದೃಷ್ಟದ ವಾಹನ ಎಂದೇ ಭಾವಿಸಿದ್ದಾರೆ. ಶಿಕಾರಿಪುರಲ್ಲಿ ಬಿ.ವೈ. ವಿಜಯೇಂದ್ರ ನಾಮಪತ್ರ ಸಲ್ಲಿಕೆಗೂ ಮುನ್ನ ಯಡಿಯೂರಪ್ಪ ಹಾಗೂ ಕುಟುಂಬಸ್ಥರು ಹಳೆಯ ಅಂಬಾಸಿಡರ್​ ಕಾರಿನಲ್ಲಿ ಆಗಮಿಸಿ ಗಮನ ಸೆಳೆದರು.

ರಾಜ್ಯ ರಾಜಕೀಯದ ರಾಜಾಹುಲಿ ಎಂದೇ ಬಣ್ಣಿಸಲ್ಪಡುವ ಯಡಿಯೂರಪ್ಪ ಈ ಬಾರಿ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದು, ಶಿಕಾರಿಪುರ ಕ್ಷೇತ್ರದಲ್ಲಿ ಮಗ ವಿಜಯೇಂದ್ರ ಕಣಕ್ಕಿಳಿದಿದ್ದಾರೆ. ತಂದೆಯ ರಾಜಕೀಯ ರಥವನ್ನು ಮುನ್ನಡೆಸಲು ವಿಜಯೇಂದ್ರ ಸಜ್ಜಾಗಿದ್ದಾರೆ. ಕುಟುಂಬದ ಸದಸ್ಯರು ನಾಮಪತ್ರ ಸಲ್ಲಿಸಲು ಹೊರಡುವಾಗ ದುಬಾರಿ ಕಾರಿನಲ್ಲೇ ಬರುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಯಡಿಯೂರಪ್ಪ, ಹಿರಿಯ ಪುತ್ರ ರಾಘವೇಂದ್ರ ಹಾಗೂ ಅವರ ಪತ್ನಿ ಜೊತೆ 30 ವರ್ಷದಷ್ಟು ಹಳೆಯ ಅಂಬಾಡಿಸರ್ ಕಾರಿನಲ್ಲಿ ಹುಚ್ಚರಾಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. 
ಯಡಿಯೂರಪ್ಪನವರು ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಈ ಕಾರನ್ನು ಖರೀದಿಸಿದ್ದರು. ಈ ಹಿಂದೆ ಪ್ರತಿ ಸಲ ನಾಮಪತ್ರ ಸಲ್ಲಿಕೆ ವೇಳೆ ಯಡಿಯೂರಪ್ಪ ಇದೇ ಅಂಬಾಸಿಡರ್ ಕಾರಿನಲ್ಲಿ ಚುನಾವಣಾ ಕಚೇರಿಗೆ ತೆರಳುತ್ತಿದ್ದರು. ಇದೀಗ ತಂದೆಯಂತೆ ತಾನು ಕೂಡಾ ರಾಜಕೀಯ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬ ಮಹದಾಸೆ ವಿಜಯೇಂದ್ರ ಅವರದ್ದಾಗಿದೆ.

ಇದನ್ನೂ ನೋಡಿ:ವರುಣದಲ್ಲಿ ಸಿದ್ದರಾಮಯ್ಯ vs ಸೋಮಣ್ಣ: ಗದ್ದುಗೆ ಗುದ್ದಾಟದಲ್ಲಿ ಗೆಲುವು ಯಾರಿಗೆ?

ABOUT THE AUTHOR

...view details