3 ಕೆ.ಜಿ ಹೆರಾಯಿನ್ ಸಾಗಿಸುತ್ತಿದ್ದ ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್: ವಿಡಿಯೋ
ಅಮೃತಸರ (ಪಂಜಾಬ್):ಪಂಜಾಬ್‌ನ ಅಮೃತಸರದ ಗಡಿಯಲ್ಲಿ 3 ಕೆ.ಜಿ ತೂಕದ ಮಾದಕ ವಸ್ತು ಹೆರಾಯಿನ್ ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸೋಮವಾರ ಹೊಡೆದುರುಳಿಸಿದೆ. ಎರಡು ಪ್ಯಾಕೆಟ್ಗಳ ಹೆರಾಯಿನ್ ವಶಕ್ಕೆ ಪಡೆಯಲಾಗಿದೆ.
ಅಮೃತಸರದ ಗಡಿ ಭಾಗದಲ್ಲಿ ಬರುವ ಬಿಒಪಿ ರಾಜತಾಲ್ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಬಿಎಸ್‌ಎಫ್‌ನ 144 ಕಾರ್ಪ್ಸ್ ಪಡೆ, ಪಾಕ್ನಿಂದ ಹಾರಿಬಂದ ಡ್ರೋನ್ ಗಮನಿಸಿದ್ದಾರೆ. ತಕ್ಷಣವೇ ಕಾರ್ಯಾಚರಣೆಗಿಳಿದಿದ್ದಾರೆ. ತಪಾಸಣೆಯಲ್ಲಿ ಹೆರಾಯಿನ್ ಇರುವ 2 ಪ್ಯಾಕೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಮೃತಸರದ ಬಿಎಸ್ಎಫ್ ಕಮಾಂಡೆಂಟ್ ಅಜಯ್ ಕುಮಾರ್ ಮಿಶ್ರಾ ತಿಳಿಸಿದರು.
ನಿಷೇಧಿತ ಪ್ರದೇಶದಲ್ಲಿ ಡ್ರೋನ್ ಹಾರಿ ಬರುತ್ತಿತ್ತು. ಇದರಲ್ಲಿ ಬಿಳಿಯ ಪ್ಯಾಕೆಟ್ಗಳು ಇರುವುದನ್ನು ಗಮನಿಸಿ ದಾಳಿ ಮಾಡಿ ಹೊಡೆದುರುಳಿಸಲಾಗಿದೆ. ಕಳ್ಳಸಾಗಣಿಕೆ ತಡೆಯಲು ಗಡಿಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಈ ಮೂಲಕ ಸೇನೆ ಪಾಕಿಸ್ತಾನದ ಮತ್ತೊಂದು ಕೃತ್ಯವನ್ನು ವಿಫಲಗೊಳಿಸಿದೆ. ಇದಕ್ಕೂ ಮೊದಲು ಭಾನುವಾರವೂ ಇದೇ ಭಾಗದಿಂದ ಬಂದ ಡ್ರೋನ್ ಅನ್ನು ಹೊಡೆದು ಹಾಕಲಾಗಿತ್ತು. ಇದರಲ್ಲೂ ಮಾದಕವಸ್ತು ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿದ ಮಳೆ ನೀರು: ಕೊಚ್ಚಿ ಹೋದ ಚಿನ್ನಾಭರಣ!