ಕರ್ನಾಟಕ

karnataka

ಯಡಿಯೂರಪ್ಪ ಮತದಾನ

ETV Bharat / videos

ಕುಟುಂಬ ಸಮೇತ ಯಡಿಯೂರಪ್ಪ ಮತದಾನ: ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ - etv bharat kannada

By

Published : May 10, 2023, 11:10 AM IST

ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ತಮ್ಮ ಕುಟುಂಬ ಸಮೇತ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಶಿಕಾರಿಪುರದ ಆಡಳಿತ ಭವನದ ಬೂತ್​ ನಂಬರ್ 134 ರಲ್ಲಿ ಮತದಾನ ಮಾಡಿದರು. ಅದಕ್ಕೂ ಮೊದಲು ಬಿಎಸ್​ವೈ ಶಿಕಾರಿಪುರದ ತಮ್ಮ ತೋಟದ ಮನೆಯಿಂದ ನೇರವಾಗಿ ತಮ್ಮ ಆರಾಧ್ಯ ದೈವ ಹುಚ್ಚರಾಯ ಸ್ವಾಮಿ ದೇವಾಲಯಕ್ಕೆ ಆಗಮಿಸಿದರು. ಇವರಿಗೆ ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ ಹಾಗೂ ಸೊಸೆಯರಾದ ತೇಜಸ್ವಿನಿ ಮತ್ತು ಪ್ರೇಮ ರಾಘವೇಂದ್ರರವರ ಪುತ್ರ ಭಗತ್ ಹಾಗೂ ವಿಜಯೇಂದ್ರ ಅವರ ಪುತ್ರಿ ಮೈತ್ರಿ ಸಾಥ್ ನೀಡಿದರು.

ಕುಟುಂಬ ಸಮೇತ ಮತದಾನ ಬಳಿಕ ಮಾತನಾಡಿದ ಯಡಿಯೂರಪ್ಪ, ರಾಜ್ಯದಲ್ಲಿ ಈ ಭಾರಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ. ವಿರೋಧ ಪಕ್ಷಗಳ ಕನಸು ನನಸಾಗುವುದಿಲ್ಲ. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಅಭ್ಯರ್ಥಿ ಬಿ.ವೈ.ವಿಜಯೇಂದ್ರ, ನಾನು ಶಿಕಾರಿಪುರದಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಇಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ನಮ್ಮ ತಂದೆ ಯಡಿಯೂರಪ್ಪ ಅವರ ಅಭಿವೃದ್ದಿಯನ್ನು ಮುಂದಿಟ್ಟುಕೊಂಡು ನಾವು ಚುನಾವಣೆಯಲ್ಲಿ‌ ಕನಿಷ್ಟ 50 ಸಾವಿರ ಮತಗಳಿಂದ ಗೆಲುವು ಸಾಧಿಸುತ್ತೇವೆ ಎಂದರು. ಸಂಸದ ರಾಘವೇಂದ್ರರವರ ದ್ವಿತೀಯ ಪುತ್ರ ಭಗತ್ ಹಾಗೂ ವಿಜಯೇಂದ್ರರವರ ಪುತ್ರಿ ಮೈತ್ರಿ ಮೊದಲ ಬಾರಿಗೆ ಮತದಾನ ಮಾಡಿದರು.

ಇದನ್ನೂ ಓದಿ:ಮೊದಲ ಬಾರಿ ಮತದಾನ ಮಾಡಿ ಜನತಂತ್ರದ ಹಬ್ಬಕ್ಕೆ ಸಾಕ್ಷಿಯಾದ ಉತ್ಸಾಹಿ ಯುವಕ - ಯುವತಿಯರು

ABOUT THE AUTHOR

...view details