ಕರ್ನಾಟಕ

karnataka

ಅಭ್ಯರ್ಥಿಗಳ ಪರ ಪ್ರಚಾರದ ವೇಳೆ ಕುಸಿದು ಬಿದ್ದ ಬಿಆರ್​ಎಸ್​ ನಾಯಕಿ ಕವಿತಾ - ವಿಡಿಯೋ

By ETV Bharat Karnataka Team

Published : Nov 18, 2023, 7:02 PM IST

ಬಿಆರ್​ಎಸ್​ ನಾಯಕಿ ಕವಿತಾ

ಹೈದರಾಬಾದ್​:ತೆಲಂಗಾಣ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಭಾರತ ರಾಷ್ಟ್ರ ಸಮಿತಿ (ಬಿಆರ್​ಎಸ್​) ನಾಯಕಿ, ಎಂಎಲ್​ಸಿ ಕೆ ಕವಿತಾ ಅವರು ತಲೆಸುತ್ತು ಬಂದು ಕುಸಿದ ಘಟನೆ ಶನಿವಾರ ನಡೆದಿದೆ. ಇಟಕಿಯಾಲ್​ ಜಿಲ್ಲೆಯಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ಬಿಸಿಲ ತಾಪಕ್ಕೆ ಸುಸ್ತಾದ ಅವರು ಪ್ರಚಾರ ವಾಹನದ ಮೇಲೆ ಇದ್ದಾಗಲೇ ಕುಸಿದರು.

ತಕ್ಷಣವೇ ಅಲ್ಲಿದ್ದ ಮುಖಂಡರು ಅವರಿಗೆ ಉಪಚರಿಸಿದರು. ಕವಿತಾ ಅವರು ಅನಾರೋಗ್ಯಕ್ಕೀಡಾಗಿದ್ದು, ಅಲ್ಲಿನ ಮುಖಂಡರಲ್ಲಿ ಆತಂಕ ಮೂಡಿಸಿತ್ತು. ಕೆಲ ಹೊತ್ತಿನ ಬಳಿಕ ಸುಧಾರಿಸಿಕೊಂಡ ಸಿಎಂ ಪುತ್ರಿ ಮತ್ತೆ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿಸಿಕೊಂಡರು.

ಜಗಿತಾಲ್ ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ ಎಂಎಲ್ ಕವಿತಾ ಅವರು, ಬಿಆರ್​ಎಸ್ ಅಭ್ಯರ್ಥಿಯನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಬೇಕೆಂದು ಕೋರಿದರು. ಮತ್ತೊಮ್ಮೆ ಬಿಆರ್​ಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಏನು ಮಾಡಲಿದೆ ಎಂಬ ಪಕ್ಷದ ಪ್ರಣಾಳಿಕೆಯನ್ನು ಸಾರ್ವಜನಿಕರಿಗೆ ವಿವರಿಸಿದರು. ಪಡಿತರ ಚೀಟಿ ಹೊಂದಿರುವ ಎಲ್ಲರಿಗೂ 5 ಲಕ್ಷ ರೂಪಾಯಿ ವಿಮೆ ನೀಡುವುದಾಗಿ ಭರವಸೆ ನೀಡಿದರು.

ಆರೋಗ್ಯ ಶ್ರೀ ಮಿತಿಯನ್ನು 15 ಲಕ್ಷ ರೂಪಾಯಿಗೆ ಹೆಚ್ಚಿಸಲಾಗುವುದು. ಗ್ಯಾಸ್ ಸಿಲಿಂಡರ್ ಹಾಗೂ ಅಗತ್ಯ ವಸ್ತುಗಳ ಬೆಲೆಯನ್ನು ಇಳಿಕೆ ಮಾಡಲಾಗುವುದು. ಮತ್ತೆ ಅಧಿಕಾರಕ್ಕೆ ಬಂದರೆ ರೈತರ ಸಾಲವನ್ನು ಮನ್ನಾ ಮಾಡಲಾಗುವುದು ಎಂದರು.

ಇದನ್ನೂ ಓದಿ:ಅಧ್ಯಕ್ಷ ಗಾದಿಗೆ ಖರ್ಗೆ, ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಪೇಮೆಂಟ್​ ಕೊಟ್ಟಿದ್ದೆಷ್ಟು?: ಪ್ರಿಯಾಂಕ್​ಗೆ ಅಶೋಕ್​ ಪ್ರಶ್ನೆ

ABOUT THE AUTHOR

...view details