ಕರ್ನಾಟಕ

karnataka

brazilian-football-legend-ronaldinho-visited-west-bengal

ETV Bharat / videos

ಕೋಲ್ಕತ್ತಾಗೆ ಭೇಟಿ ನೀಡಿದ ಬ್ರೆಜಿಲಿಯನ್ ಫುಟ್ಬಾಲ್ ದಂತಕಥೆ ರೊನಾಲ್ಡಿನೊ- ವಿಡಿಯೋ - ETV Bharath Karnataka

By ETV Bharat Karnataka Team

Published : Oct 16, 2023, 4:47 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಬ್ರೆಜಿಲ್‌ನ ಫುಟ್ಬಾಲ್ ದಂತಕಥೆ ರೊನಾಲ್ಡಿನೊ ಗೌಚೊ ಅವರು ಎರಡು ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಿದ್ದಾರೆ. ಭಾನುವಾರ ರಾತ್ರಿ ಕೋಲ್ಕತ್ತಾಗೆ ಬಂದಿಳಿದ ಅವರನ್ನು ಅಪಾರ ಅಭಿಮಾನಿಗಳು ವಿಮಾನ ನಿಲ್ದಾಣದ ಹೊರಗೆ ಸ್ವಾಗತಿಸಿದರು. ಪ.ಬಂಗಾಳ ಮುಖ್ಯಮಂತ್ರಿ ಭೇಟಿ ಸೇರಿದಂತೆ ನಾನಾ ಕಾರ್ಯಕ್ರಮಗಳಲ್ಲಿ ರೊನಾಲ್ಡಿನೊ ಭಾಗವಹಿಸಲಿದ್ದಾರೆ.  

ಈ ಹಿಂದೆ ಕೋಲ್ಕತ್ತಾಗೆ ಫುಟ್ಬಾಲ್​ ತಾರೆಯರಾದ ಪೀಲೆ, ಡಿಯಾಗೋ ಮರಡೋನಾ ಮತ್ತು ಲಿಯೋನೆಲ್ ಮೆಸ್ಸಿ ಸೇರಿದಂತೆ ಹಲವಾರು ಆಟಗಾರರು ಬಂದಿದ್ದರು. ಫುಟ್‌ಬಾಲ್-ಕ್ರೇಜ್ ನಗರಕ್ಕೆ ಮಾಜಿ ಬ್ಯಾಲನ್ ಡಿ'ಓರ್ ವಿಜೇತ ರೊನಾಲ್ಡಿನೊ ಗೌಚೊ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ.  

ನವರಾತ್ರಿಯ ವಿಶೇಷತೆಯಲ್ಲಿ ದುರ್ಗಾ ಪೂಜಾ ಆಚರಣೆಗಳಲ್ಲಿ ಭಾಗವಹಿಸಿದ ಅವರು ಇಲ್ಲಿನ ಶ್ರೀ ಭೂಮಿ ಸ್ಪೋರ್ಟಿಂಗ್ ಕ್ಲಬ್‌ಗೆ ಭೇಟಿ ನೀಡಿದರು. ಕ್ಲಬ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ, ಫುಟ್ಬಾಲ್​ ಆಡಿದ್ದಲ್ಲದೇ ನೃತ್ಯ ಮಾಡಿ ಸಂಭ್ರಮಿಸಿದರು. ನಂತರ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದರು.  

ಫೇಸ್‌ಬುಕ್‌ನಲ್ಲಿ ರೊನಾಲ್ಡಿನೊ ಗೌಚೊ ಕೋಲ್ಕತ್ತಾಗೆ ಭೇಟಿಯ ಬಗ್ಗೆ ಕೆಲ ದಿನಗಳ ಹಿಂದೆ ಬರೆದುಕೊಂಡಿದ್ದರು. "ಅಕ್ಟೋಬರ್ ಮಧ್ಯದಲ್ಲಿ ಕೋಲ್ಕತ್ತಾಗೆ ನನ್ನ ಮೊದಲ ಪ್ರವಾಸವನ್ನು ಮಾಡಲಿದ್ದೇನೆ. ನನ್ನ R10 ಫುಟ್‌ಬಾಲ್ ಅಕಾಡೆಮಿಗೆ ಭೇಟಿ ನೀಡುವುದು ಸೇರಿದಂತೆ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತೇನೆ, ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಾಗುತ್ತೇನೆ. ಶ್ರೀ ಭೂಮಿ ಸ್ಪೋರ್ಟಿಂಗ್, ಅಹಿರ್ತೋಲಾ ಯುವಕ ಬೃಂದೋ, ಬರುಯಿಪುರ್, ಗ್ರೀನ್ ಪಾರ್ಕ್ ಮತ್ತು ರಿಶ್ರಾಗೆ ಭೇಟಿ ನೀಡುವ ಮೂಲಕ ದುರ್ಗಾ ಪೂಜೆಯ ಉತ್ಸವಗಳಲ್ಲಿ, ನಾನು ಚಾರಿಟಿ ಫುಟ್ಬಾಲ್ ಪಂದ್ಯದ ಭಾಗವಾಗುತ್ತೇನೆ" ಎಂದು ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ: ಮುಂದಿನ ಒಲಿಂಪಿಕ್ಸ್‌ನಲ್ಲಿ ಟಿ20 ಕ್ರಿಕೆಟ್‌! 128 ವರ್ಷಗಳ ನಂತರ ಅವಕಾಶ: ಐಒಸಿ ಒಪ್ಪಿಗೆ ನೀಡಿದ 5 ಕ್ರೀಡೆಗಳು ಯಾವುವು ಗೊತ್ತೇ?

ABOUT THE AUTHOR

...view details