ಕರ್ನಾಟಕ

karnataka

Both India and Pakistan are good cricket teams: Sourav Ganguly

ETV Bharat / videos

ಭಾರತ, ಪಾಕಿಸ್ತಾನ ಉತ್ತಮ ಕ್ರಿಕೆಟ್ ತಂಡಗಳು: ಸೌರವ್ ಗಂಗೂಲಿ - ಟೀಂ ಇಂಡಿಯಾ ಬಗ್ಗೆ ಸೌರವ್ ಗಂಗೂಲಿ ಪ್ರತಿಕ್ರಿಯೆ

By ETV Bharat Karnataka Team

Published : Aug 24, 2023, 5:40 PM IST

ಕೋಲ್ಕತ್ತಾ: ಭಾರತ ಮತ್ತು ಪಾಕಿಸ್ತಾನ ಎರಡೂ ಉತ್ತಮ ಕ್ರಿಕೆಟ್ ತಂಡಗಳು. ವಿಶ್ವಕಪ್​ ಆಗಲಿ ಅಥವಾ ಯಾವುದೇ ಟೂರ್ನಿಯಾಗಲಿ, ಉತ್ತಮವಾಗಿ ಆಡುವ ತಂಡ ಗೆದ್ದೇ ಗೆಲ್ಲುತ್ತದೆ. ನನಗೆ ಯಾವುದೇ ನೆಚ್ಚಿನ ತಂಡಗಳಂತ ಇಲ್ಲ ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ. 

ಮುಂಬರುವ ವಿಶ್ವಕಪ್‌ನಲ್ಲಿ ಯಾವ ತಂಡ ಗೆಲ್ಲುತ್ತದೆ? ನಿಮ್ಮ ನೆಚ್ಚಿನ ತಂಡ ಯಾವುದೆಂದು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಜಸ್ಪ್ರೀತ್ ಬುಮ್ರಾ ತಮ್ಮ ಫಿಟ್ನೆಸ್ ಅನ್ನು ಉಳಿಸಿಕೊಂಡಿದ್ದಾರೆ. ತಂಡದಲ್ಲಿ ಮೂವರು ಸ್ಪಿನ್ನರ್​ಗಳನ್ನು ಮಾತ್ರ ನಾವು ಹೊಂದಬಹುದು. ಅಕ್ಸರ್ ಪಟೇಲ್ ಸರಿಯಾದ ಆಯ್ಕೆ. ಕಾರಣ ಅವರು ಬ್ಯಾಟಿಂಗ್​ ಸಹ ಮಾಡಬಹುದು. ತಂಡಕ್ಕೆ ಆಸರೆಯಾಗಬಹುದು ಎಂದು ಆಗಸ್ಟ್ 30ರಿಂದ ಆರಂಭಗೊಳ್ಳಲಿರುವ ಏಷ್ಯಾಕಪ್ 2023ಕ್ಕೆ ಆಯ್ಕೆಯಾದ ತಂಡದ ಬಗ್ಗೆಯೂ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ವೇಳೆ ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ಯಶಸ್ವಿಯಾಗಿದ್ದಕ್ಕೆ ಇಸ್ರೋಗೆ ಸೌರವ್ ಗಂಗೂಲಿ ಅಭಿನಂದನೆ ಕೂಡ ಸಲ್ಲಿಸಿದರು.

ಇದನ್ನೂ ಓದಿ:ICC Rankings: ಐಸಿಸಿ ರ್‍ಯಾಂಕಿಂಗ್​ನಲ್ಲೂ ಜಸ್ಪ್ರೀತ್​ ಬುಮ್ರಾ ಕಮ್​ಬ್ಯಾಕ್​!

ABOUT THE AUTHOR

...view details