ಶೂಟಿಂಗ್‌ಗಾಗಿ ಕಾಶ್ಮೀರ ಕಣಿವೆಗೆ ಆಗಮಿಸಿದ ಬಾಲಿವುಡ್ ಸ್ಟಾರ್ ಜಾನ್ ಅಬ್ರಹಾಂ: ವಿಡಿಯೋ - etv bharat kannada
Published : Dec 13, 2023, 7:22 PM IST
ಅನಂತನಾಗ್(ಜಮ್ಮು& ಕಾಶ್ಮೀರ):ಬಾಲಿವುಡ್ ನಟ ಜಾನ್ ಅಬ್ರಹಾಂ ತಮ್ಮ ಮುಂಬರುವ ಸಿನಿಮಾದ ಚಿತ್ರೀಕರಣಕ್ಕಾಗಿ ಕಾಶ್ಮೀರಕ್ಕೆ ಆಗಮಿಸಿದ್ದಾರೆ. ಈ ವೇಳೆ ಅವರು ಸ್ಥಳೀಯ ಸಾಂಪ್ರದಾಯಿಕ ಉಡುಗೆ 'ಫಿರಾನ್' ಧಿರಿಸಿನಲ್ಲಿ ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣ ಪಹಲ್ಗಾಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ನೈಸರ್ಗಿಕ ಸೌಂದರ್ಯ ಮತ್ತು ಅಲ್ಲಿನ ಜನರ ಆತಿಥ್ಯಕ್ಕೆ ನಟ ಜಾನ್ ಅಬ್ರಹಾಂ ಮನಸೋತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ನಟ " ಇಲ್ಲಿನ ನನ್ನ ಅನುಭವವು ನಿಜವಾಗಿಯೂ ಅದ್ಭುತವಾಗಿದೆ. ಕಾಶ್ಮೀರದ ಸೌಂದರ್ಯವನ್ನು ಪದಗಳಲ್ಲಿ ವರ್ಣಿಸುವುದು ಕಷ್ಟ. ನಾವು ಈ ನೈಸರ್ಗಿಕ ಸೌಂದರ್ಯವನ್ನು ರಕ್ಷಿಸಬೇಕು. ಪ್ರವಾಸಿಗರು ಕಾಶ್ಮೀರ ಕಣಿವೆಯನ್ನು ಕೇವಲ ಶೂಟಿಂಗ್ ಸ್ಪಾಟ್ ಎಂದು ಪರಿಗಣಿಸದೇ ಸಾಧ್ಯವಾದಷ್ಟು ಕಾಶ್ಮೀರದ ಸೌಂದರ್ಯವನ್ನು ಅನ್ವೇಷಿಸಬೇಕು. ಕಾಶ್ಮೀರಕ್ಕೆ ಶೂಟಿಂಗ್‌ಗಾಗಿ ಮಾತ್ರವಲ್ಲದೇ ಜೀವನದ ಸುಮಧುರ ಕ್ಷಣಗಳನ್ನು ಕಳೆಯಲು ಇಲ್ಲಿಗೆ ಭೇಟಿ ನೀಡಬೇಕು ಎಂದು ನಾನು ಬಯಸುತ್ತೇನೆ. ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿ ಇರಿಸಿ" ಎಂದು ಅವರು ಪ್ರವಾಸಿಗರಿಗೆ ಮನವಿ ಮಾಡಿದರು.
ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಇಲಾಖೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿ, ಕಾಶ್ಮೀರದ ಸಾಂಪ್ರದಾಯಿಕ ಉಡುಗೆ ಫಿರಾನ್ ಅನ್ನು ಧರಿಸಿರುವ ಜಾನ್ ಅಬ್ರಹಾಂ ಅವರು ಪಹಲ್ಗಾಮ್‌ನಲ್ಲಿ ಮುಂಬರುವ ತಮ್ಮ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ ಎಂದು ತಿಳಿಸಿದೆ.
ಇದನ್ನೂ ಓದಿ:ವೈಷ್ಣೋದೇವಿ ಸನ್ನಿಧಿಯಲ್ಲಿ ಶಾರುಖ್ ಖಾನ್: ಪಠಾಣ್, ಜವಾನ್ ಬಳಿಕ 'ಡಂಕಿ'ಗಾಗಿ ದೇಗುಲಕ್ಕೆ ಬಂದ ಸ್ಟಾರ್