ಕರ್ನಾಟಕ

karnataka

ETV Bharat / videos

ಕಾಶ್ಮೀರದ ಸೌಂದರ್ಯಕ್ಕೆ ಮಾರು ಹೋದ ಚಿತ್ರರಂಗ.. ಪ್ರಕೃತಿಯ ಮೋಡಿಗೆ ಫಿದಾ

By

Published : Nov 22, 2022, 11:08 PM IST

Updated : Feb 3, 2023, 8:33 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕಾಶ್ಮೀರ ಕಣಿವೆಯು ತನ್ನ ಅಗಾಧವಾದ ಸೌಂದರ್ಯ ಪ್ರಕೃತಿಯೊಂದಿಗೆ ಪ್ರಪಂಚದಲ್ಲಿ ವಿಶಿಷ್ಟ ಆಕರ್ಷಣೆ ಹೊಂದಿದೆ. ಪ್ರತಿ ಋತುವಿನಲ್ಲೂ ವಿಭಿನ್ನ ಬಣ್ಣಗಳಿಂದ ಹೊಳೆಯುವ ಕಾಶ್ಮೀರ ಪ್ರವಾಸಿಗರು ನೆಚ್ಚಿನ ತಾಣವೂ ಹೌದು. ಅದರಲ್ಲೂ ಶರತ್​ ಋತು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಬಾಲಿವುಡ್ ಚಲನಚಿತ್ರಗಳ ಚಿತ್ರೀಕರಣಕ್ಕೆ ನೆಚ್ಚಿನ ಸಮಯವೆಂದೇ ಪರಿಗಣಿಸಲಾಗಿದೆ. ಹಿಂದಿ ಚಲನಚಿತ್ರಗಳ ಅನೇಕ ಹಾಡುಗಳ ಸುಂದರವಾದ ಸಾಹಿತ್ಯ ಮತ್ತು ಪ್ರಣಯದ ಮಾಂತ್ರಿಕ ದೃಶ್ಯಗಳೊಂದಿಗೆ ಚಿತ್ರೀಕರಿಸಲಾಗಿದೆ. ಶರತ್​ ಋತುವಿನ ಈ ಸಮಯದಲ್ಲಿ ಕ್ಯಾಮೆರಾವನ್ನು ಎತ್ತ ತಿರುಗಿಸಿದರೂ, ಅದರ ಫ್ರೇಮ್ ಪ್ರಕೃತಿ ಮೋಡಿಯ ಬಣ್ಣಗಳನ್ನು ಸೆರೆಹಿಡಿಯುತ್ತದೆ. ಕಳೆದ ಕೆಲವು ದಶಕಗಳಲ್ಲಿ ಬಾಲಿವುಡ್ ನಿರ್ದೇಶಕರು ವಿದೇಶಗಳಲ್ಲಿ ಚಿತ್ರೀಕರಣಕ್ಕೆ ಆದ್ಯತೆ ನೀಡುತ್ತಿದ್ದರೂ, ಮತ್ತೆ ಕಾಶ್ಮೀರದತ್ತ ಆಕರ್ಷಿತವಾಗುತ್ತಿದ್ದಾರೆ. ಚಲನಚಿತ್ರಗಳ ಹಾಡುಗಳು ಮತ್ತು ವೆಬ್ ಸೀರಿಸ್ ಚಿತ್ರೀಕರಣಗಳಲ್ಲಿ ನಿರತರಾಗಿರುವ ಅನೇಕ ಚಿತ್ರತಂಡಗಳನ್ನು ಇತ್ತೀಚಿನ ದಿನಗಳಲ್ಲಿ ಕಾಶ್ಮೀರದಲ್ಲಿ ಕಾಣಬಹುದಾಗಿದೆ.
Last Updated : Feb 3, 2023, 8:33 PM IST

ABOUT THE AUTHOR

...view details