ಆ್ಯಕ್ಷನ್ ಪ್ರಿನ್ಸ್ ಕೆಡಿ ಚಿತ್ರದ ಅಖಾಡದಲ್ಲಿ ಬಾಲಿವುಡ್ ಖಳನಾಯಕ - ಈಟಿವಿ ಭಾರತ ಕನ್ನಡ
ನಿರ್ದೇಶಕ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಹು ನಿರೀಕ್ಷಿತ ಸಿನೆಮಾ ಕೆಡಿಯ ಟೈಟಲ್ ಲಾಂಚ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಸಿನೆಮಾಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಭರ್ಜರಿಯಾಗಿ ತಯಾರಾಗಿದ್ದಾರೆ. ಈ ಸಿನೆಮಾದಲ್ಲಿ ಧ್ರುವ ಸರ್ಜಾಗೆ ಠಕ್ಕರ್ ಕೊಡಲು ಬಾಲಿವುಡ್ ಖಳನಾಯಕ ಸಂಜಯ್ ದತ್ ಅವರು ಅಖಾಡಕ್ಕೆ ಆಗಮಿಸಿದ್ದಾರೆ.
ಕೆಡಿ ಪ್ಯಾನ್ ಇಂಡಿಯಾ ಸಿನೆಮಾವಾಗಿದ್ದು, ಒಂದಲ್ಲ ಒಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿದೆ. ಇದೀಗ ಕೆಜಿಎಫ್ ಸಿನೆಮಾದಲ್ಲಿ ಅಬ್ಬರಿಸಿದ್ದ ಅಧೀರನನ್ನು ದುಬಾರಿ ಸಂಭಾವನೆ ಕೊಟ್ಟು ಸಿನೆಮಾ ಅಡ್ಡಕ್ಕೆ ಕರೆತಂದು ಮತ್ತೆ ಸುದ್ದಿಯಲ್ಲಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಯಾರಿಗೂ ತಿಳಿಯದಂತೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಕರೆ ತಂದು ಹೊಸ ವರ್ಷಕ್ಕೆ ಅಣ್ಣಯ್ಯಪ್ಪನ ಪಾತ್ರ ರಿವೀಲ್ ಮಾಡಿದ್ದರು. ಈಗ ಅದೇ ರೀತಿ ಎರಡನೇ ಹಂತದ ಚಿತ್ರೀಕರಣ ನಡೆಸುತ್ತಿರುವ ಪ್ರೇಮ್ ಸಂಜಯ್ ದತ್ ಅವರ ಶೂಟಿಂಗ್ ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ :ಮಗಳ ಮೆಹೆಂದಿ ಸಮಾರಂಭದಲ್ಲಿ ಸುನೀಲ್ ಶೆಟ್ಟಿ ಭರ್ಜರಿ ಡ್ಯಾನ್ಸ್: ಫೋಟೋ ವೈರಲ್