ಕರ್ನಾಟಕ

karnataka

ನದಿಯಲ್ಲಿ ಮಗುಚಿದ ದೋಣಿ, ಪ್ರಾಣಪಾಯದಿಂದ ಪಾರಾದ 8 ಮಂದಿ: ವಿಡಿಯೋ..

ETV Bharat / videos

ನದಿಯಲ್ಲಿ ಮಗುಚಿದ ದೋಣಿ, ಪ್ರಾಣಾಪಾಯದಿಂದ ಪಾರಾದ 8 ಮಂದಿ: ವಿಡಿಯೋ.. - national news

By

Published : May 27, 2023, 7:14 PM IST

ಹಮೀರ್​​ಪುರ (ಉತ್ತರ ಪ್ರದೇಶ):ದೋಣಿಯಲ್ಲಿ ಮೃತದೇಹ ಸಾಗಿಸುತ್ತಿದ್ದ ವೇಳೆ ಅಸಮತೋಲನ ಉಂಟಾಗಿ ದೋಣಿ ಮಗುಚಿರುವ ಘಟನೆ ಉತ್ತರ ಪ್ರದೇಶದ ಹಮೀರ್​​ಪುರದ ಕೆನ್​​ ನದಿಯಲ್ಲಿ ನಡೆದಿದೆ. ದೋಣಿ ಮಗುಚಿದ ಪರಿಣಾಮ ದೋಣಿಯಲ್ಲಿದ್ದ 8 ಮಂದಿ ನೀರಿಗೆ ಜಿಗಿದು ನಂತರ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಶುಕ್ರವಾರ ಬೈಜೆಮಾವು ಗ್ರಾಮದ ನಿವಾಸಿ ಧನಿರಾಮ್​ (70) ಎಂಬವರ ಸಾವನ್ನಪ್ಪಿದ್ದರು, ಅವರ ಅಂತ್ಯಕ್ರಿಯೆಗೆ ಮೃತರ ಕುಟುಂಬಸ್ಥರು ಪಕ್ಕದ ಗ್ರಾಮಕ್ಕೆ ಕೆನ್​​ ನದಿಯ ಮೂಲಕ ತೆರಳುತ್ತಿದ್ದರು. ದೋಣಿಯು ನದಿಯ ಮಧ್ಯಭಾಗದಲ್ಲಿ ಚಲಿಸುತ್ತಿರುವ ವೇಳೆ ಅಸಮತೋಲನ ಉಂಟಾಗಿ ದೋಣಿ ಮಗುಚಿದೆ. ಇದರಿಂದ ದೋಣಿಯಲ್ಲಿದ್ದ 8 ಮಂದಿ ನೀರಿಗೆ ಹಾರಿದ್ದಾರೆ ಅದೃಷ್ಟವಶಾತ್​​ ದೋಣಿಯಲ್ಲಿ ಚಲಿಸುತ್ತಿದ್ದ ಎಲ್ಲರಿಗೂ ಈಜು ಬರುತ್ತಿದ್ದರಿಂದ ಎಲ್ಲರೂ ಈಜಿ ದಡ ಸೇರಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಜೊತೆಗೆ ಮೃತದೇಹವನ್ನು ರಕ್ಷಿಸಿದ್ದಾರೆ. 

ಇದನ್ನೂ ಓದಿ :ಪರೀಕ್ಷೆ ಪಾಸ್​ ಮಾಡಲು ದೈಹಿಕ​ ಸಂಬಂಧ ಬೆಳೆಸುವಂತೆ ವಿದ್ಯಾರ್ಥಿನಿಗೆ ಶಿಕ್ಷಕನ ಬೇಡಿಕೆ: ವಿಡಿಯೋ ವೈರಲ್​

ABOUT THE AUTHOR

...view details