ಕೃಷ್ಣಾ ನದಿಯಲ್ಲಿ ದೋಣಿ ಪಲ್ಟಿ.. ಈಜಿ ಪ್ರಾಣ ಉಳಿಸಿಕೊಂಡ ಭಕ್ತರು - ಬಬಲಾದಿಯ ಸದಾಶಿವ ಮುತ್ಯಾ ಜಾತ್ರೆ
ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿಯ ಸದಾಶಿವ ಮುತ್ಯಾ ಜಾತ್ರೆಗೆ ಬಂದಿದ್ದ ಭಕ್ತರು ತಮ್ಮ ಊರುಗಳಿಗೆ ವಾಪಸ್ ಹೋಗುತ್ತಿದ್ದ ವೇಳೆ ಕೃಷ್ಣಾ ನದಿಯಲ್ಲಿ ದೋಣಿ ಮಗುಚಿದ್ದು, ಅದೃಷ್ಟವಶಾತ್ ಭಕ್ತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಬಲಾದಿ ಮತ್ತು ಮುಂಡಗನೂರು ನಡುವೆ ಕೃಷ್ಣಾ ನದಿ ದಾಟುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಮುಂಡಗನೂರಿಗೆ ಹೊರಟಿದ್ದ ಭಕ್ತರು ದೋಣಿಯಲ್ಲಿದ್ದರು. ಕೃಷ್ಣಾ ನದಿಯಲ್ಲಿ ಹೊರಟಿದ್ದ ವೇಳೆ ದೋಣಿ ಪಲ್ಟಿಯಾಗಿದ್ದು, ಭಕ್ತರು ನದಿಗೆ ಹಾರಿ, ಈಜಿ ಪ್ರಾಣ ಉಳಿಸಿಕೊಂಡಿದ್ದಾರೆ.
ಬಬಲಾದಿ ಜಾತ್ರೆಯಲ್ಲಿ ಬಬಲಾದಿ ಮಠದ ಪೀಠಾಧಿಪತಿ ಸಿದ್ದರಾಮಯ್ಯ ಸ್ವಾಮೀಜಿ ಅವರ ಕಾಲಜ್ಞಾನ ಕೇಳಿ ವಾಪಸ್ ತಮ್ಮ ಗ್ರಾಮಗಳಿಗೆ ಕೃಷ್ಣಾ ನದಿ ದಾಟಲು ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ಹೆಚ್ಚಿನ ಭಕ್ತರು ಒಟ್ಟೊಟ್ಟಿಗೆ ದೋಣಿ ಹತ್ತಿದ್ದರಿಂದ ಜನಸಂದಣಿ ಹೆಚ್ಚಾದಂತೆ ದೋಣಿ ಮಗುಚಿದೆ. ಪವಾಡ ಸದೃಶ್ಯ ರೀತಿಯಲ್ಲಿ ತಕ್ಷಣ ಭಕ್ತರು ನದಿಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ.
ಇದನ್ನೂಓದಿ:ಮುಂಗಾರಿ ಮಳೆ ಒಂಭತ್ತಾಣೆ, ಹಿಂಗಾರಿ ಮಳೆ ಹತ್ತಾಣೆ.. ಕಾಲಜ್ಞಾನ ನುಡಿದ ಬಬಲಾದಿ ಸ್ವಾಮೀಜಿ