ಕರ್ನಾಟಕ

karnataka

ಬಿಎಂಟಿಸಿ ಇವಿ ಬಸ್​ಗಳ ಫಾಸ್ಟ್ಯಾಗ್​ ಸಮಸ್ಯೆ: ಟೋಲ್​ನಲ್ಲಿ ಬಸ್​ಗಳ ಪರದಾಟ

ETV Bharat / videos

ಬಿಎಂಟಿಸಿ ಇವಿ ಬಸ್​ಗಳ ಫಾಸ್ಟ್​ಟ್ಯಾಗ್​​ ​ಸಮಸ್ಯೆ: ಟೋಲ್​ನಲ್ಲಿ ಬಸ್​ಗಳ ಪರದಾಟ - ಫಾಸ್ಟ್ಯಾಗ್ ರಿನೀವಲ್

By

Published : Mar 8, 2023, 7:13 PM IST

ಯಲಹಂಕ:ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಎಡವಟ್ಟಿಗೆ ಪ್ರಯಾಣಿಕರು ಪದೇ ಪದೆ ತೊಂದರೆ ಅನುಭವಿಸತ್ತಲೇ ಇದ್ದಾರೆ. ಬಸ್​ಗಳ ನಿರ್ವಹಣೆ ಮಾಡಲು ಆಗದೇ ಖಾಸಗೀಕರಣಕ್ಕೆ ಮುಂದಾಗಿದ್ದ ಬಿಎಂಟಿಸಿ ಇದೀಗ ಮತ್ತೊಂದು ಎಡವಟ್ಟಿನಿಂದ ಪ್ರಯಾಣಿಕರು ಹಿಡಿಶಾಪ ಹಾಕ್ತಿದ್ದಾರೆ. ಯಲಹಂಕ ದೊಡ್ಡಬಳ್ಳಾಪುರ ರಸ್ತೆ ಮಾರಸಂದ್ರದ ಬಳಿ ಟೋಲ್​ನಲ್ಲಿ ಬಿಎಂಟಿಸಿ ಇವಿ ಬಸ್​ಗಳು ಎಡವಟ್ಟು ಮಾಡಿಕೊಂಡಿವೆ. 

ಪರಿಸರ ಸ್ನೇಹಿ ಇವಿ ಬಸ್​ಗಳ ಫಾಸ್ಟ್​​ಟ್ಯಾಗ್​​ನಲ್ಲಿ ಹಣವಿಲ್ಲದೇ ಟೋಲ್ ಬಳಿಯೇ ಬಿಎಂಟಿಸಿ ಬಸ್​ಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಬೇರೆ ಬಸ್​ಗಳಲ್ಲಿ ಕಳುಹಿಸಿದ ಪ್ರಸಂಗ ನಡೆದಿದೆ. ಇನ್ನು ಇಲಾಖೆ ಸಿಬ್ಬಂದಿಗೆ ಸಂಬಳ‌ ಕೊಡಲು ಈ ಹಿಂದೆ ಬಿಎಂಟಿಸಿ ಹೆಣಗಾಡಿತ್ತು. ಈಗ ಪರಿಸರ ಸ್ನೇಹಿ ಎಲೆಕ್ಟ್ರಾನಿಕ್ ಬಸ್​ನಿಂದ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಅರ್ಧ ದಾರಿಯಲ್ಲೇ ಇವಿ ಬಸ್​ಗಳಿಂದ ಪ್ರಯಾಣಿಕರನ್ನು ಇಳಿಸಿ ಬೇರೆ ಬಸ್​ಗಳಿಗೆ ಹತ್ತಿಸುವ ಪರಿಸ್ಥಿತಿಗೆ ಬಿಎಂಟಿಸಿ ಬಂತಾ ಎಂಬ ಅನುಮಾನ ಮೂಡ್ತಿದೆ. 

ಟೋಲ್ ಕಟ್ಟಲು ಹಣವಿಲ್ಲದೇ ಟೋಲ್‌ ಬಳಿಯೇ 15ಕ್ಕೂ ಹೆಚ್ಚು ಬಿಎಂಟಿಸಿ ಬಸ್​ಗಳು ನಿಂತಿದ್ದು, ಫಾಸ್ಟ್​​​ಸ್ಟ್ಯಾಗ್​ ರಿನೀವಲ್ ಮಾಡಿಸದ ಬಿಎಂಟಿಸಿ ತಪ್ಪಿಗೆ ಪ್ರಯಾಣಿಕರಿಗೆ ಶಿಕ್ಷೆಯಾಗಿದೆ. ಬಿಎಂಟಿಸಿ ಬಸ್​ಗಳಿಂದ ಇಳಿದು ಬೇರೆ ಬಸ್​ಗಳನ್ನು ಹಿಡಿದು ತೆರಳುತ್ತಾ ಪ್ರಯಾಣಿಕರು ಹಿಡಿ ಶಾಪ ಹಾಕಿದ್ದಾರೆ. ನಿನ್ನೆ ಸಂಜೆ 5.30ರ ಸುಮಾರಿಗೆ ಯಲಹಂಕ ದೊಡ್ಡಬಳ್ಳಾಪುರ ರಸ್ತೆ ಮಾರಸಂದ್ರ ಟೋಲ್ ಬಳಿ ಬೆಂಗಳೂರಿಗೆ ಬರ್ತಿದ್ದ 15ಕ್ಕೂ ಹೆಚ್ಚು ಇವಿ ಬಿಎಂಟಿಸಿ ಬಸ್​ಗಳನ್ನು ಫಾಸ್ಟ್​​​​ಟ್ಯಾಗ್​​​​​​​ ನಲ್ಲಿ ಹಣವಿಲ್ಲದ ಕಾರಣ ನಿಲ್ಲಿಸಲಾಗಿತ್ತು. ಫಾಸ್ಟ್​ಟ್ಯಾಗ್​  ರಿಚಾರ್ಜ್ ಮಾಡದೇ ಎಡವಟ್ಟು ಮಾಡುವ ಮೂಲಕ ಬಿಎಂಟಿಸಿ ಮುಳುಗುತ್ತಿರೋ ಹಡಗು ಎಂಬುದನ್ನು ತೋರಿಸಿಕೊಟ್ಟಿದೆ. ಬಿಎಂಟಿಸಿಯ ಇಂತಹ ಸಮಸ್ಯೆ ವಿರುದ್ಧ ಪ್ರಯಾಣಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ಟೋಲ್ ಮ್ಯಾನೇಜರ್ ರವಿಬಾಬು ಮಾತನಾಡಿ, ಇವಿ ಬಸ್​ಗಳು ಕನಿಷ್ಠ ಬ್ಯಾಲೆನ್ಸ್ ಮೈಂಟೈನ್ ಮಾಡಬೇಕು. ಆದರೆ, ಅದನ್ನು ಮೈಂಟೆನ್ ಮಾಡದೇ ಬಸ್​ಗಳು ಇಲ್ಲಿ ನಿಂತಿತ್ತು ಎಂದು ತಿಳಿಸಿದ್ದಾರೆ.

ಇದನ್ನೂ ನೋಡಿ:ಕಾರಿನ ಮೇಲೆ ದಾಳಿ ನಡೆಸಿದ ಕಾಡಾನೆ - ವಿಡಿಯೋ

ABOUT THE AUTHOR

...view details