ಕರ್ನಾಟಕ

karnataka

ಮೈಗೆ ಹಳದಿ, ಕೆಂಪು ಬಣ್ಣ ಬಳಿದುಕೊಂಡು ರಾಜ್ಯೋತ್ಸವ ಆಚರಿಸಿದ ದಾವಣಗೆರೆಯ ರಕ್ತದಾನಿ: ವಿಡಿಯೋ

ETV Bharat / videos

ಮೈಗೆ ಹಳದಿ, ಕೆಂಪು ಬಣ್ಣ ಬಳಿದುಕೊಂಡು ರಾಜ್ಯೋತ್ಸವ ಆಚರಿಸಿದ ದಾವಣಗೆರೆಯ ರಕ್ತದಾನಿ: ವಿಡಿಯೋ

By ETV Bharat Karnataka Team

Published : Nov 1, 2023, 7:27 PM IST

ದಾವಣಗೆರೆ: ನಗರದಲ್ಲಿ 68ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ಇಂದಿಗೆ ಐವತ್ತು ವರ್ಷಗಳು ತುಂಬಿವೆ. ಈ ಹಿನ್ನೆಲೆ ದಾವಣಗೆರೆಯ ರಕ್ತದಾನಿ ಶಿವಕುಮಾರ್ ಇಂದು ಮೈಗೆ ಹಳದಿ ಮತ್ತು ಕೆಂಪು ಬಣ್ಣವನ್ನು ಬಳಿದುಕೊಂಡು ಕನ್ನಡಹಬ್ಬವನ್ನು ವಿಶೇಷವಾಗಿ ಆಚರಿಸಿದರು. ಜಿಲ್ಲಾ ಕ್ರೀಡಾಂಗಣಕ್ಕಾಗಮಿಸಿದ ಶಿವಕುಮಾರ್​ ಅವರನ್ನು ಗಮನಿಸಿದ ಕನ್ನಡ ಪ್ರೇಮಿಗಳು ಸೆಲ್ಫಿಗಾಗಿ ಮುಗಿಬಿದ್ದರು. 

ಶಿವಕುಮಾರ್ ಅವರು ತಮ್ಮ ಕನ್ನಡ ಪ್ರೇಮದ ಜೊತೆಗೆ ಕೈಯಲ್ಲಿ ರಕ್ತದ ಮಾದರಿಯ ಪ್ಯಾಕೆಟ್ ಹಿಡಿದು ರಕ್ತದಾನ ಮಾಡಿ ಎಂದು ಜನರಲ್ಲಿ ಜಾಗೃತಿ ಮೂಡಿಸಿ ಎಲ್ಲರ ಗಮನ ಸೆಳೆದರು. ಬಳಿಕ ಸಚಿವ ಎಸ್ಎಸ್ ಮಲ್ಲಿಕಾರ್ಜುನ್‌ ಹಾಗೂ ಮಾಯಕೊಂಡ ಶಾಸಕ ಬಸವಂತಪ್ಪ ಅವರನ್ನು ಶಿವಕುಮಾರ್ ಭೇಟಿಯಾದರು. ಬಳಿಕ ಶಿವಕುಮಾರ್ ಅವರು ಸಚಿವರು ಹಾಗೂ ಶಾಸಕರ ಜೊತೆ ಫೋಟೋ ತೆಗೆಸಿಕೊಂಡು ಸಂತಸಪಟ್ಟರು. 

ಧ್ವಜಾರೋಹಣ ಮಾಡಿದ ಸಚಿವ ಎಸ್ಎಸ್ ಮಲ್ಲಿಕಾರ್ಜುನ್‌:ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 68ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಇಲಾಖೆ ಸಚಿವ ಎಸ್​ ಎಸ್ ಮಲ್ಲಿಕಾರ್ಜುನ್‌ ಧ್ವಜಾರೋಹಣ ನೆರವೇರಿಸಿದರು. ಕ್ರೀಡಾಂಗಣದ ಸುತ್ತಮುತ್ತ ಬಿಗಿ ಪೋಲಿಸ್ ಭದ್ರತೆ ಕಲ್ಪಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಬಸವಂತಪ್ಪ ವಹಿಸಿದ್ದರು. ಜಿಲ್ಲಾಧಿಕಾರಿ ವೆಂಕಟೇಶ್ ಎಂ.ವಿ, ಎಸ್​ಪಿ ಉಮಾ ಪ್ರಶಾಂತ್ ಉಪಸ್ಥಿತರಿದ್ದರು.

ಇದನ್ನೂ ಓದಿ:ಕೊಪ್ಪಳದಲ್ಲಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮ : ಬಸ್​ನಲ್ಲಿ ಕನ್ನಡ ಗೀತೆ ಹಾಡಿ ಪ್ರಯಾಣಿಕರನ್ನು ರಂಜಿಸಿದ ನಿರ್ವಾಹಕ

ABOUT THE AUTHOR

...view details