ಕರ್ನಾಟಕ

karnataka

ಅಮಾವಾಸ್ಯೆ ದಿನ ಸ್ಮಶಾನದಲ್ಲಿ ವಾಮಾಚಾರ ಶಂಕೆ : ಗ್ರಾಮಸ್ಥರಲ್ಲಿ ಆತಂಕ

ETV Bharat / videos

ಅಮಾವಾಸ್ಯೆ ದಿನ ಸ್ಮಶಾನದಲ್ಲಿ ವಾಮಾಚಾರ ಶಂಕೆ : ಗ್ರಾಮಸ್ಥರಲ್ಲಿ ಆತಂಕ - ಈಟಿವಿ ಭಾರತ ಕನ್ನಡ

By

Published : Apr 25, 2023, 5:57 PM IST

ಹಾವೇರಿ: ಸ್ಮಶಾನದಲ್ಲಿ ವಾಮಾಚಾರ ಮಾಡಿ, ಅದಕ್ಕಾಗಿ ಬಳಸಿದ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದಿರುವ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚೊಗಚಿಕೊಪ್ಪ ಗ್ರಾಮದಲ್ಲಿ ನಡೆದಿದೆ. ವಾಮಾಚಾರ ನಡೆಸಿದ ಜಾಗದಲ್ಲಿ ಕುಂಕುಮ, ನಿಂಬೆಹಣ್ಣು, ಕುಂಬಳಕಾಯಿ, ತಲೆಬುರುಡೆ ಮತ್ತು ಮೂವರು ಹುಡುಗಿಯರ ಭಾವಚಿತ್ರಗಳು ಪತ್ತೆಯಾಗಿವೆ. ಅಮಾವಾಸ್ಯೆಯ ದಿನ ರಾತ್ರಿ ವೇಳೆ ಮಹಿಳೆ ಸೇರಿ ನಾಲ್ವರು ವಾಮಾಚಾರದಲ್ಲಿ ತೊಡಗಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸ್ಥಳದಲ್ಲಿ ಸಿಕ್ಕ ಕುಂಬಳಕಾಯಿ ಮೇಲೆ ವ್ಯಕ್ತಿಯೋರ್ವನ ಹೆಸರನ್ನು ಬರೆಯಲಾಗಿದೆ. ಅಲ್ಲದೆ ದುಷ್ಕರ್ಮಿಗಳು ವಾಮಾಚಾರಕ್ಕೆ ಬಳಸಿದ ಗೊಂಬೆಗಳು ಸ್ಥಳದಲ್ಲಿ ಸಿಕ್ಕಿವೆ. ಅಮಾವಾಸ್ಯೆ ದಿನ ರಾತ್ರಿ ಸ್ಮಶಾನದಲ್ಲಿ ವ್ಯಕ್ತಿಯೋರ್ವ ಮಂತ್ರ ಪಠಿಸುತ್ತಿದ್ದುದನ್ನು ಗಮನಿಸಿದ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ವಾಮಾಚಾರದಲ್ಲಿ ತೊಡಗಿದ್ದವರನ್ನು ಹಿಡಿಯಲು ಯತ್ನಿಸಿದ್ದಾರೆ. ಈ ವೇಳೆ ಓರ್ವ ವ್ಯಕ್ತಿ ಸೆರೆ ಸಿಕ್ಕಿದ್ದು, ಉಳಿದವರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಹಿರೇಕೆರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ :ಘೋರ ವಾಮಾಚಾರ.. ಮಹಿಳೆಯ ಖಾಸಗಿ ಅಂಗಕ್ಕೆ ಕೈಹಾಕಿ ಕರುಳು ಹೊರಗೆಳೆದು ಕೊಂದ್ರು ಅಕ್ಕ-ಬಾವ!

ABOUT THE AUTHOR

...view details