ಸಮೀಕ್ಷೆಗಳು ಏನೇ ಹೇಳಿದರೂ ಬಿಜೆಪಿಗೆ 115 ಸ್ಥಾನ ಬರುತ್ತೆ: ಬಿಎಸ್ವೈ ವಿಶ್ವಾಸ - ಸಮೀಕ್ಷೆಗಳು ಏನೇ ಹೇಳಿದರೂ ಬಿಜೆಪಿಗೆ 115 ಸ್ಥಾನ ಬರುತ್ತೆ
ಶಿವಮೊಗ್ಗ: ರಾಜ್ಯ ಚುನಾವಣೆ ಫಲಿತಾಂಶದ ಬಗ್ಗೆ ಯಾವುದೇ ಸಮೀಕ್ಷೆಗಳು ಏನೇ ಹೇಳಲಿ, ಬಿಜೆಪಿ ರಾಜ್ಯದಲ್ಲಿ 115 ಸ್ಥಾನಗಳಿಸಿ ಸರ್ಕಾರ ರಚನೆ ಮಾಡುತ್ತೆವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿವೈ ವಿಜಯೇಂದ್ರ 40,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದರು.
ನಾನು ರಾಜ್ಯದ ಉದ್ದಗಲಕ್ಕೂ ನಮ್ಮ ಎಲ್ಲ ಮುಖಂಡರೊಂದಿಗೆ ನಾನು ಮಾತನಾಡಿದ್ದೇನೆ. ಎಲ್ಲ ಅಭಿಪ್ರಾಯ ಸಂಗ್ರಹ ಮಾಡಿದ್ದೇನೆ. ನಾನು ಹೋದಾಗ ಸಿಕ್ಕ ಜನ ಬೆಂಬಲವನ್ನು ನೋಡಿ ಹೇಳುತ್ತಿದ್ದೇನೆ. ಎಸ್ಸಿ - ಎಸ್ಟಿ ಸಮುದಾಯದವರಿಗೆ ಕೊಟ್ಟಂತಹ ಮೀಸಲಾತಿ ಗಮನಿಸಿದಾಗ ಈ ಸಮೀಕ್ಷೆಗಳಿಗೆ ಆಧಾರ ಇರುವುದಿಲ್ಲ ಎಂದರು.
ನಿಶ್ಚಿತವಾಗಿ ನಾವು 115ಕ್ಕೂ ಹೆಚ್ಚು ಸೀಟು ಗೆದ್ದು ಸ್ವಂತ ಶಕ್ತಿ ಮೇಲೆ ಸರ್ಕಾರ ರಚನೆ ಮಾಡುತ್ತೇವೆ. ಕಾಂಗ್ರೆಸ್ ನವರು ಏನೇ ಹೇಳಲಿ, ಅದಕ್ಕೆ ನಾನು ಮರು ಟೀಕೆ ಮಾಡುವುದಿಲ್ಲ. ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿ ಕೊಟ್ಟಿದ್ದು ನಿಜ. ಒಂದೆರಡು ಸಮೀಕ್ಷೆಗಳು ನಮ್ಮ ಪರವಾಗಿಯೂ ಇವೆ. ಆದರೆ, ಫಲಿತಾಂಶ ಬಂದ ಅಂತಿಮ ತೀರ್ಮಾನ ಆಗುತ್ತದೆ. ರಾಜ್ಯದ ಚುನಾವಣಾ ಫಲಿತಾಂಶದಲ್ಲಿ ನಮ್ಮನ್ನು ಬಿಟ್ಟು ಸರ್ಕಾರ ಮಾಡಲು ಎಂಬ ಮಾತನ್ನು ಹೆಚ್ಡಿ ಕುಮಾರಸ್ವಾಮಿ ಹೇಳುವುದರಲ್ಲಿ ತಪ್ಪೇನಿಲ್ಲ ಎಂದರು.
ಇದನ್ನೂ ಓದಿ:ಹಿಂದಿನ ಎಕ್ಸಿಟ್ ಪೋಲ್ಗಳೆಲ್ಲ ಉಲ್ಟಾ ಹೊಡೆದಿದ್ದವು: ಬಿ ಎಲ್ ಸಂತೋಷ್ ಟಾಂಗ್