ರಾಹುಕಾಲಕ್ಕೂ ರಾಹುಲ್ ಗಾಂಧಿಗೂ ಯಾವ ವ್ಯತ್ಯಾಸವೂ ಇಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ - ಲೋಕಸಭೆ ಚುನಾವಣೆ
Published : Nov 22, 2023, 6:55 PM IST
ಮಂಗಳೂರು : ಸ್ವಾತಂತ್ರ್ಯದ ಬಳಿಕ 55 ವರ್ಷದ ಆಡಳಿತದಲ್ಲಿ ಕಾಂಗ್ರೆಸ್ಗೆ ಇತಿಶ್ರೀ ಹಾಡಿದವರೆಂದರೆ ಅದು ನಾಯಕ ರಾಹುಲ್ ಗಾಂಧಿ. ನಾವೇನಾದರೂ ಮನೆಯಲ್ಲಿ ಶುಭಕಾರ್ಯ ಮಾಡಬೇಕೆಂದರೆ ಒಳ್ಳೆಯ ಕಾಲ ನೋಡಿ ಪೂಜೆ ಮಾಡುತ್ತೇವೆ. ರಾಹುಕಾಲದಲ್ಲಿ ಯಾವ ಕಾರ್ಯ ಆರಂಭ ಮಾಡೋಲ್ಲ. ಆದರೆ ಕಾಂಗ್ರೆಸ್ ಪಕ್ಷದ ನಾಯಕನ ಹೆಸರೇ ರಾಹುಲ್ ಗಾಂಧಿ. ರಾಹುಕಾಲಕ್ಕೂ ರಾಹುಲ್ ಗಾಂಧಿಗೂ ಯಾವ ವ್ಯತ್ಯಾಸವೂ ಇಲ್ಲ. ಯಾವ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿದರೋ ಆ ಕ್ಷಣದಿಂದ ಕಾಂಗ್ರೆಸ್ ಪಕ್ಷದ ರಾಹುಕಾಲ ಶುರುವಾಗಿದೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ವ್ಯಂಗ್ಯವಾಡಿದರು.
ಮಂಗಳೂರಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಬೇಕೆಂದು INDIA ವನ್ನು ಕಟ್ಟಲಾಗಿದೆ. ಅದರ ನಾಯಕರಾಗಿರುವ ರಾಹುಲ್ ಗಾಂಧಿಗೆ ಈ ವೇದಿಕೆಯಲ್ಲಿ ಹಾಕುವ ಸವಾಲೇನೆಂದರೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ರಾಷ್ಟ್ರದ ಪ್ರಧಾನಿಯಾಗುವುದು ಖಂಡಿತಾ. ಅದನ್ನು ತಡೆಯಲು ಯಾವ ದುಷ್ಟ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದರು.
ಅಧಿಕಾರದ ದರ್ಪದಿಂದ ನಡೆಯುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಹೇಳುವುದೇನೆಂದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ 28ಕ್ಕೆ 28 ಸ್ಥಾನವನ್ನು ಸಂಸದರನ್ನು ಕಳುಹಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕೈ ಬಲಪಡಿಸುತ್ತೇವೆ ಎಂದು ವಿಜಯೇಂದ್ರ ಹೇಳಿದರು.
ಇದನ್ನೂ ಓದಿ :ಜಮೀರ್ ಅಹ್ಮದ್ಗೆ ರಸ್ತೆಯಲ್ಲಿ ಓಡಾಡಲು ಬಿಟ್ಟಿದ್ದೇ ನಮ್ಮ ಅಪರಾಧ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ