ಕರ್ನಾಟಕ

karnataka

BJP MLA and Wife of Cricketer Ravindra Jadeja, Rivaba Jadeja

ETV Bharat / videos

'ಹಮಾರಾ ದೇಶ್ ಫಿರ್ ಸೆ ಜೀತೆಗಾ'; ರಿವಾಬಾ ಜಡೇಜಾ ವಿಶ್ವಾಸ - MLA Rivaba Jadeja

By ETV Bharat Karnataka Team

Published : Oct 28, 2023, 5:43 PM IST

ಗಾಂಧಿನಗರ (ಗುಜರಾತ್​): ಭಾರತ ಮತ್ತೊಮ್ಮೆ ವಿಶ್ವಕಪ್ ಗೆಲ್ಲುವುದು ಖಚಿತ ಎಂದು ಟೀಂ ಇಂಡಿಯಾದ ಕ್ರಿಕೆಟ್​ ಪಟು ರವೀಂದ್ರ ಜಡೇಜಾ ಅವರ ಪತ್ನಿ ಹಾಗೂ ಬಿಜೆಪಿ ಶಾಸಕಿ ರಿವಾಬಾ ಜಡೇಜಾ ವಿಶ್ವಾಸ ವ್ಯಕ್ತಪಡಿಸಿದರು. ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತೀಯ ಕ್ರಿಕೆಟ್ ತಂಡ ಮತ್ತು ಎಲ್ಲ ಕ್ರಿಕೆಟ್ ಅಭಿಮಾನಿಗಳನ್ನು ನಾನು ಅಭಿನಂದಿಸುವೆ. ನಮ್ಮ ದೇಶ ಮತ್ತೊಮ್ಮೆ ವಿಶ್ವಕಪ್ ಗೆಲ್ಲಲೆಂದು ಪ್ರಾರ್ಥಿಸುತ್ತಿರುವವರಲ್ಲಿ ನಾನು ಕೂಡ ಒಬ್ಬಳು. ಹಾಗಾಗಿ ಮುಂಚಿತವಾಗಿಯೇ ಶುಭಾಶಯ ತಿಳಿಸುವೆ ಎಂದರು. 

ಅವರು (ರವೀಂದ್ರ ಜಡೇಜಾ) ಬ್ಯಾಟಿಂಗ್‌ಗೆ ಬರುವ ಕ್ರಮಾಂಕವು ತೀರಾ ಒತ್ತಡದ್ದು. ಅವರಿಗೆ ಈ ಒತ್ತಡದ ಸನ್ನಿವೇಶಗಳನ್ನು ಹೇಗೆ ನಿಭಾಯಿಸಬೇಕೆಂಬ ಬಗ್ಗೆ ಅರಿವಿದೆ. ತಂಡ ಮತ್ತು ಕೋಚ್‌ಗಳ ನಂಬಿಕೆಯನ್ನು ಅವರು ಸಾಕಷ್ಟು ಬಾರಿ ಉಳಿಸಿಕೊಂಡಿದ್ದಾರೆ ಎಂದು ಪತಿ ರವೀಂದ್ರ ಜಡೇಜಾ ಬ್ಯಾಟಿಂಗ್​ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ರಿವಾಬಾ, ಲೀಗ್ ಹಂತದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲ್ಲುವ ಮೂಲಕ ಟೀಂ ಇಂಡಿಯಾ 20 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕಿದೆ. ಅದೇ ಆಕ್ರಮಣಶೀಲತೆಯಿಂದ ಫೈನಲ್ ತಲುಪಿ ಚಾಂಪಿಯನ್ ಆಗಿ ಹೊರಹೊಮ್ಮಲಿದೆ ಎಂದು ಆಶಿಸಿದರು. ನಾಳೆ (ಅಕ್ಟೋಬರ್ 29) ರಂದು ಲಕ್ನೋದ ಏಕನಾ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಲಿವೆ. 

ಇದನ್ನೂ ಓದಿ:ಕ್ರಿಕೆಟ್​ ವಿಶ್ವಕಪ್​​: ಮಧ್ಯಮ ಓವರ್​ಗಳಲ್ಲಿ ಡಾಮಿನೇಟ್​ ಮಾಡಿದ ತಂಡಗಳೇ ಟೂರ್ನಿಯ ಹೀರೋಗಳು.. ಹೀಗಿದೆ ತಂಡಗಳ ಅಂಕಿ-ಅಂಶ

ABOUT THE AUTHOR

...view details