ರೌಡಿಶೀಟರ್ ಜೊತೆ ವೇದಿಕೆ ಹಂಚಿಕೊಂಡ ಬಿಜೆಪಿ ನಾಯಕರು: ಪ್ರಲ್ಹಾದ್ ಜೋಶಿ ಹೇಳಿದ್ದೇನು? - BJP leaders with rowdy Sunil
ಧಾರವಾಡ: ರೌಡಿ ಸೈಲೆಂಟ್ ಸುನೀಲ್ ಜೊತೆ ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ನನಗೆ ಏನಾಗಿದೆ ಗೊತ್ತಿಲ್ಲ. ಈಗ ಮಾಧ್ಯಮಗಳು ಹೇಳುತ್ತಿದ್ದೀರಿ ಅದು ಏನಂತ ಚೆಕ್ ಮಾಡುವೆ ಎಂದಿದ್ದಾರೆ. ಈ ಕುರಿತು ಮಾತನಾಡಿದ ಅವರು, ಅವನು ಯಾರು? ಅವನದು ಏನಾಗಿದೆ? ನೋಡಿಕೊಂಡು ಬಳಿಕ ಪ್ರತಿಕ್ರಿಯಿಸುವೆ. ತೇಜಸ್ವಿ, ರಮೇಶ್ ಹೇಳಿದ ತಕ್ಷಣ ಪಕ್ಷಕ್ಕೆ ಕರೆದುಕೊಂಡಂತೆ ಅಲ್ಲ. ಅವರನ್ನು ಪಕ್ಷಕ್ಕೆ ತಗೋಬೇಕಾದರೆ ಹಿನ್ನೆಲೆ ಮುನ್ನೆಲೆ ಪರಿಶೀಲಿಸುವೆ ಎಂದರು. ತೇಜಸ್ವಿ ಯಾವ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ ನೋಡುವೆ. ಪರಿಶೀಲನೆ ಮಾಡಿ, ರಾಜ್ಯ ಅಧ್ಯಕ್ಷರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
Last Updated : Feb 3, 2023, 8:33 PM IST