ಕರ್ನಾಟಕ

karnataka

ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ದ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ETV Bharat / videos

ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ - College Circle to Bangarpet Circle

By ETV Bharat Karnataka Team

Published : Oct 3, 2023, 9:27 PM IST

ಕೋಲಾರ : ಕಳೆದೊಂದು ತಿಂಗಳಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಖಂಡಿಸಿ ಇಂದು ಬಿಜೆಪಿ ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಕೋಲಾರ ನಗರದ ಬಂಗಾರಪೇಟೆ ವೃತ್ತದಲ್ಲಿ ಆರಂಭವಾದ ಪ್ರತಿಭಟನಾ ರ‍್ಯಾಲಿಯಲ್ಲಿ ಮಾಜಿ ಸಿಎಂ ಸದಾನಂದ ಗೌಡ, ಮಾಜಿ ಸಚಿವ ಸಿ.ಟಿ.ರವಿ, ವಿಧಾನಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ, ರವಿಕುಮಾರ್ ಸೇರಿದಂತೆ ಹಲವು ರಾಜ್ಯ ನಾಯಕರುಗಳು ಹಾಗೂ ಜಿಲ್ಲೆಯ ಮಾಜಿ ಶಾಸಕರುಗಳು, ಮುಖಂಡರು ಭಾಗವಹಿಸಿದ್ರು. ಇವರೊಟ್ಟಿಗೆ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಕೂಡಾ ಹೆಜ್ಜೆ ಹಾಕಿದರು.

ಬಂಗಾರಪೇಟೆ ವೃತ್ತದಿಂದ ಕಾಲೇಜು ಸರ್ಕಲ್​, ಚಂಪಕ್​ ವೃತ್ತದ ಮೂಲಕ ಎಂ.ಜಿ.ರಸ್ತೆಗೆ ಆಗಮಿಸಿದ ಪ್ರತಿಭಟನಾ ರ‍್ಯಾಲಿ ನಂತರ ವೇದಿಕೆ ಕಾರ್ಯಕ್ರಮಕ್ಕೆ ಬಂದು ಸೇರಿತ್ತು. ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯ ರವಿಕುಮಾರ್​, ಸಿ.ಟಿ.ರವಿ ಸೇರಿದಂತೆ ಹಲವು ಮುಖಂಡರುಗಳು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್​​ ಸರ್ಕಾರವನ್ನು ಟೀಕಿಸಿದ್ರು. ಅಲ್ಲದೇ ಕೋಲಾರದ ಜಿಲ್ಲಾಧಿಕಾರಿ, ಕೋಲಾರ ಎಸ್ಪಿ ಹಾಗೂ ಡಿಎಫ್​ಒ ಅವರನ್ನು ಅಮಾನತು ಮಾಡುವಂತೆ ಆಗ್ರಹಪಡಿಸಿದರು. 

ಕಳೆದೊಂದು ತಿಂಗಳಿಂದ ಅರಣ್ಯ ಇಲಾಖೆ ಒತ್ತುವರಿ ತೆರವು ವೇಳೆ ರೈತರ ಬೆಳೆಗಳನ್ನು ನಾಶಮಾಡಿ ರೈತರನ್ನು ವಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ. ರೈತರ ಬಳಿ ಎಲ್ಲಾ ಭೂಮಿಯ ದಾಖಲೆಗಳಿದ್ದರೂ ಕೂಡಾ ರೈತರಿಂದ ಭೂಮಿಯನ್ನು ಕಿತ್ತುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೆಪ್ಟೆಂಬರ್​-28ರ ಈದ್​ ಮಿಲಾದ್ ಹಬ್ಬದಂದು ಕೋಲಾರದ ಕ್ಲಾಕ್​ ಟವರ್​ನಲ್ಲಿ ಖಡ್ಗದ ದ್ವಾರ ಬಾಗಿಲು ನಿರ್ಮಾಣ ಮಾಡಲು ಅನುಮತಿ ನೀಡಿದ ಜಿಲ್ಲಾಧಿಕಾರಿ ಹಾಗೂ ಎಸ್ಪಿ ವಿರುದ್ದ ಜೊತೆಗೆ ಸೆಪ್ಟೆಂಬರ್-25ರಂದು ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಕೋಲಾರ ಸಂಸದ ಮುನಿಸ್ವಾಮಿಯವರನ್ನು ಎಸ್ಪಿ ವೇದಿಕೆಯಿಂದ ತಳ್ಳಿ ಹೊರಹಾಕಿರುವ ಕ್ರಮವನ್ನು ಖಂಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್​ ಒಂದು ಸಮುದಾಯವನ್ನು ಓಲೈಕೆ ಮಾಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಅಲ್ಲದೆ ಕೋಲಾರದಲ್ಲಿ ವ್ಯವಸ್ಥೆ ಹಾಳಾಗಿದ್ದು, ಕೋಲಾರ ಡಿಸಿ ಅಕ್ರಂಪಾಷಾ, ಎಸ್ಪಿ ನಾರಾಯಣ್​ ಹಾಗೂ ಡಿಎಫ್​ಒ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಿ, ಇಲ್ಲವೇ ಅಮಾನತು ಮಾಡಿ ಎಂದು ಆಗ್ರಹಿಸಿದರು.

ಇದನ್ನೂ ಓದಿ:'ಜನತಾ ದರ್ಶನ' ವೇದಿಕೆಯಲ್ಲಿ ಸಂಸದ ಮುನಿಸ್ವಾಮಿ, ಶಾಸಕ ನಾರಾಯಣಸ್ವಾಮಿ ಜಟಾಪಟಿ

ABOUT THE AUTHOR

...view details