ಬಜರಂಗದಳ ಕಾರ್ಯಕರ್ತ ಹರ್ಷ ಮನೆಗೆ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಭೇಟಿ.. - Prime Minister Narendra Modi
ಶಿವಮೊಗ್ಗ:ಕಳೆದ ವರ್ಷ ಕೊಲೆಯಾಗಿದ್ದ ಬಜರಂಗದಳ ಕಾರ್ಯಕರ್ತ ಹರ್ಷ ಹಿಂದೂ ಮನೆಗೆ ಶಿವಮೊಗ್ಗ ನಗರ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಭೇಟಿ ನೀಡಿದ್ದರು. ನಗರದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿರುವ ಚನ್ನಬಸಪ್ಪ ಅವರು ಇಂದು ಸಿಗೇಹಟ್ಟಿಯ ಹರ್ಷನ ಮನೆಗೆ ತೆರಳಿದ್ದರು. ಈ ವೇಳೆ ಹರ್ಷನ ಕುಟುಂಬಸ್ಥರು ಆರತಿ ಬೆಳಗಿ ಚನ್ನಬಸಪ್ಪ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಈ ವೇಳೆ ಚನ್ನಬಸಪ್ಪನವರು ಹರ್ಷನ ಕುಟುಂಬದವರ ಯೋಗಕ್ಷೇಮ ವಿಚಾರಿಸಿದರು. ಹರ್ಷನ ಬಲಿದಾನ ವ್ಯರ್ಥವಾಗಬಾರದು. ನಾವೆಲ್ಲಾ ಹಿಂದೂ ರಾಷ್ಟ್ರ ಕಟ್ಟಬೇಕಿದೆ. ಇದಕ್ಕೆ ನಮ್ಮೂಂದಿಗೆ ಕೈಜೋಡಿಸಿ ಎಂದು ವಿನಂತಿಸಿಕೊಂಡಿದ್ದಾರೆ. ಈ ವೇಳೆ ಹರ್ಷನನ್ನು ನೆನೆದು ಹರ್ಷನ ತಾಯಿ ಹಾಗೂ ಅಕ್ಕ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು. ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಹರ್ಷನ ವಿಚಾರವನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಲಿದೆ. ಅಲ್ಲದೆ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೇರಿದಂತೆ ದೇಶದ ವಿವಿಧ ಬಿಜೆಪಿಯ ಮುಖಂಡರು ಅಗಮಿಸಲಿದ್ದಾರೆ. ಇನ್ನು ಹರ್ಷನ ಮನೆಗೆ ಬಿಜೆಪಿ ಅಭ್ಯರ್ಥಿ ಭೇಟಿ ನೀಡಿದ ಸಂದರ್ಭದಲ್ಲಿ ನಗರದ ಬಿಜೆಪಿಯ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ:ಯಡಿಯೂರಪ್ಪ ಅವರನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ: ಬಿ ವೈ ವಿಜಯೇಂದ್ರ