ಕರ್ನಾಟಕ

karnataka

ETV Bharat / videos

ಪಾಲಿಕೆ ಕಚೇರಿಯೊಳಗೆ ಬಿಜೆಪಿ ಮತ್ತು ಸಿಪಿಎಂ ಕೌನ್ಸಿಲರ್‌ಗಳ ನಡುವೆ ಘರ್ಷಣೆ: ವಿಡಿಯೋ

By

Published : Nov 7, 2022, 7:32 PM IST

Updated : Feb 3, 2023, 8:31 PM IST

ತಿರುವನಂತಪುರಂ (ಕೇರಳ): ಪಾಲಿಕೆಯಲ್ಲಿನ ಗುತ್ತಿಗೆ ನೇಮಕಾತಿಗೆ ಸಂಬಂಧಿಸಿದಂತೆ ಹೆಸರುಗಳನ್ನು ನೀಡುವಂತೆ ಕೋರಿ ಮೇಯರ್‌ ಸಿಪಿಎಂ ಜಿಲ್ಲಾ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಈ ಪತ್ರ ವಿವಾದಕ್ಕೆ ಕಾರಣವಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ತಿರುವನಂತಪುರ ಪಾಲಿಕೆ ಕೌನ್ಸಿಲರ್‌ಗಳು ಕಾರ್ಪೋರೇಷನ್ ಒಳಗೆ​ ವಾಗ್ವಾದಕ್ಕಿಳಿದ್ದಾರೆ. ರಾಜಕೀಯ ಪ್ರಚಾರಕ್ಕಾಗಿ ರಚಿಸಲಾದ ಪತ್ರ ನಕಲಿ ಎಂದು ಮೇಯರ್ ಆರ್ಯ ರವೀಂದ್ರನ್ ತಳ್ಳಿ ಹಾಕಿದ್ದರೂ, ಕಾಂಗ್ರೆಸ್ ಮತ್ತು ಬಿಜೆಪಿ ಕೌನ್ಸಿಲರ್‌ಗಳು ಈ ಬಗ್ಗೆ ತನಿಖೆ ನಡೆಸುವಂತೆ ಮತ್ತು ಮೇಯರ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಬಿಜೆಪಿ ಕೌನ್ಸಿಲರ್‌ಗಳು ಸೋಮವಾರ ಬೆಳಗ್ಗೆ ಮೇಯರ್‌ ಕಚೇರಿಗೆ ಮುತ್ತಿಗೆ ಹಾಕಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪಾಲಿಕೆ ಕಚೇರಿಯಿಂದ ಕೌನ್ಸಿಲರ್‌ಗಳನ್ನು ಬಲವಂತವಾಗಿ ಹೊರ ಹಾಕಿದರು. ನಂತರ ಬಿಜೆಪಿ ಕೌನ್ಸಿಲರ್‌ಗಳ ಕಚೇರಿ ಧ್ವಂಸವನ್ನು ಖಂಡಿಸಿ ಎಲ್‌ಡಿಎಫ್ ಕೌನ್ಸಿಲರ್‌ಗಳು ಸ್ಥಳಕ್ಕೆ ಬಂದರು. ಈ ವೇಳೆ ಬಿಜೆಪಿ ಮತ್ತು ಎಲ್‌ಡಿಎಫ್ ಕೌನ್ಸಿಲರ್‌ಗಳ ನಡುವೆ ಮಾತಿನ ಚಕಮಕಿ ನಡೆಯಿತು.
Last Updated : Feb 3, 2023, 8:31 PM IST

ABOUT THE AUTHOR

...view details