ಜಾನುವಾರಗಳನ್ನು ನೋಡಿಕೊಳ್ಳದಿದ್ದರೆ ಶೂಗಳಿಂದ ಥಳಿತ.. ಡಂಗೂರ ಕೇಳಿ ಗ್ರಾಮಸ್ಥರು ಕೆಂಡಾಮಂಡಲ - ಗ್ರಾಮ ಪಂಚಾಯಿತಿ ಪದಾಧಿಕಾರಿ
ಶಹದೋಲ್( ಮಧ್ಯಪ್ರದೇಶ): ಇಲ್ಲಿನ ಶಾಹದೋಲ್ ಜಿಲ್ಲೆಯ ಹಳ್ಳಿಯಲ್ಲಿ ಪ್ರತಿಯೊಬ್ಬರು ತಮ್ಮ ಜಾನುವಾರುಗಳನ್ನು ಜಾಗರೂಕರಾಗಿ ನೋಡಿಕೊಳ್ಳಬೇಕು ಎಂದು ಡಂಗೂರ ಸಾರಿ ಹೇಳುತ್ತಿರುವುದು ಕೇಳಿ ಬಂದಿದೆ.
ಒಂದು ವೇಳೆ ಇದಕ್ಕೆ ವಿರುದ್ದವಾಗಿ ನಡೆದುಕೊಂಡರೆ, 500 ರೂ. ದಂಡ ವಿಧಿಸಲಾಗುವುದು. ಜತೆಗೆ ಐದು ಬಾರಿ ಶೂಗಳಿಂದ ಹೊಡೆಯಲಾಗುವುದು ಎಂದು ನಿಯಮ ಜಾರಿಗೆ ತರಲಾಗಿದೆ. ತಪ್ಪಿತಸ್ಥರಿಗೆ ಐದು ಬಾರಿ ಬೂಟುಗಳಿಂದ ಥಳಿಸಲಾಗುವುದು ಎಂದು ಡಂಗೂರ ಬಾರಿಸುವ ಮೂಲಕ ಘೋಷಣೆ ಮಾಡುತ್ತಿದ್ದ ಮುನಾಡಿ ಎಂಬ ವ್ಯಕ್ತಿಯ ಬಗ್ಗೆ ಇದೀಗ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಕಳೆದ ಹಲವಾರು ವರ್ಷಗಳಿಂದ ಸರಪಂಚ್ ಹುದ್ದೆಗೆ ಆಯ್ಕೆಯಾದ ಹಲವರನ್ನು ನೋಡಿದ್ದೇವೆ. ಆದರೆ ಅವರು ಅಂತಹ ಘೋಷಣೆಗಳನ್ನು ಮಾಡಲು ಆದೇಶ ನೀಡಿರಲಿಲ್ಲ. ನಾನು ಘೋಷಣೆಯನ್ನು ಕೇಳಿದಾಗ ಅದು ತುಂಬಾ ಅವಮಾನಕರವಾಗಿತ್ತು. ಗ್ರಾಮ ಪಂಚಾಯಿತಿ ಪದಾಧಿಕಾರಿಗಳು ಇಂತಹ ಅವಹೇಳನಕಾರಿ ಘೋಷಣೆ ಮಾಡುವಂತೆ ಮುನಾಡಿಗರಿಗೆ ಸೂಚಿಸುವುದು ನ್ಯಾಯವಲ್ಲ'' ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.
ಮತ್ತೋರ್ವ ಗ್ರಾಮಸ್ಥರು ಮಾತನಾಡಿ, "ಮುನಾಡಿ ವ್ಯಕ್ತಿಗೆ ಘೋಷಣೆ ಮಾಡುವ ಜವಾಬ್ದಾರಿಯನ್ನು ಪಂಚಾಯಿತಿಯ ಸರಪಂಚ್ ಮತ್ತು ಕಾರ್ಯದರ್ಶಿಗೆ ವಹಿಸಿದ್ದಾರೆ. ನಾವು ಇದರಲ್ಲಿ ತಪ್ಪು ಹುಡುಕುತ್ತಿಲ್ಲ. ಆದರೆ, ಈ ಅವಮಾನಕರ ಆದೇಶ ಏಕೆ?. ಇದು ಸಂಪೂರ್ಣವಾಗಿ ಅಗೌರವವಾಗಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸುರಪುರದಲ್ಲಿ ಪ್ರವಾಹ ಭೀತಿ: ಡಂಗೂರ ಸಾರುವ ಮೂಲಕ ಮುನ್ಸೂಚನೆ
TAGGED:
etv bharath kannada news