Davanagere: ರೈತರ ಜಮೀನುಗಳಲ್ಲಿ ಕಾಣಿಸಿಕೊಂಡ ದೈತ್ಯ ಕಾಡುಕೋಣ: ವಿಡಿಯೋ - ಈಟಿವಿ ಭಾರತ ಕರ್ನಾಟಕ
ದಾವಣಗೆರೆ: ರೈತರ ಜಮೀನುಗಳಲ್ಲಿ ಕಾಡುಕೋಣ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿರುವ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸಾಲಬಾಳು ಗ್ರಾಮ ಬಳಿ ನಡೆದಿದೆ. ಜಮೀನಿನಲ್ಲಿ ದೈತ್ಯ ಕಾಡುಕೋಣ ಕಂಡು ರೈತರು, ಕೂಲಿಕಾರ್ಮಿಕರು ಸ್ಥಳದಿಂದ ಕಾಲ್ಕಿತ್ತಿರುವ ಘಟನೆ ಕೂಡ ಜರುಗಿದೆ. ಇನ್ನು ಕೆಲ ರೈತರು ಜಮೀನುಗಳಲ್ಲಿ ಏಕಾಂಗಿಯಾಗಿ ಸಂಚರಿಸುತ್ತಿದ್ದ ಕಾಡುಕೋಣದ ವಿಡಿಯೋ, ಫೋಟೋಗಳನ್ನು ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹಾಗೂ ದಾವಣಗೆರೆ ಜಿಲ್ಲೆಯ ಗಡಿಯಲ್ಲಿರುವ ಸಾಲಬಾಳು ಗ್ರಾಮಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಿಂದ ಈ ಕಾಡುಕೋಣ ಬಂದಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾಡಿನಿಂದ ನಾಡಿಗೆ ಆಗಮಿಸಿರುವ ಈ ಕಾಡುಕೋಣ ಮನುಷ್ಯರಿಗೆ ಹಾಗೂ ಸಾಕು ಪ್ರಾಣಿಗಳಿಗೆ ಯಾವುದೇ ಹಾನಿ ಮಾಡಿಲ್ಲ. ಸದ್ಯ ಆತಂಕಗೊಂಡಿರುವ ಗ್ರಾಮಸ್ಥರು ಹಾಗೂ ರೈತರು ತಕ್ಷಣ ಕಾಡುಕೋಣವನ್ನು ಹಿಡಿದು ಕಾಡಿಗೆ ಅಟ್ಟಬೇಕು ಎಂದು ಅರಣ್ಯ ಇಲಾಖೆಗೆ ಒತ್ತಾಯಿಸುತ್ತಿದ್ದಾರೆ. ಇನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡುಕೋಣ ಕಾಣಿಸಿಕೊಂಡ ಸ್ಥಳಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಕಾಲುವೆಯಲ್ಲಿ ಈಜಿ ಬಂದ ಕಾಡು ಕೋಣ : ರಕ್ಷಿಸಿದ ಕ್ಷಣಾರ್ಧದಲ್ಲಿ ಸಾವು