ಹು-ಧಾ ಪಾಲಿಕೆ ಆವರಣದಲ್ಲಿಯೇ ಭರ್ಜರಿ ಬಾಡೂಟ: ಕಾರ್ಪೊರೇಷನ್ನಲ್ಲಿ ಸಿದ್ಧವಾಯ್ತು ಬಿರಿಯಾನಿ, ಕಬಾಬ್ - ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿ ಭರ್ಜರಿ ಬಾಡೂಟಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿರೋಧ ಪಕ್ಷದ ನಾಯಕರ ಕಚೇರಿ ಉದ್ಘಾಟನೆ ಹಿನ್ನೆಲೆ ಭರ್ಜರಿ ಬಾಡೂಟಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಹುಬ್ಬಳ್ಳಿ ಧಾರವಾಡ ಪಾಲಿಕೆ ವಿರೋಧ ಪಕ್ಷದ ನಾಯಕ ದೊರೈರಾಜ ಮಣಿಕುಂಟ್ಲ ಕಚೇರಿ ಉದ್ಘಾಟನೆ ಹಿನ್ನೆಲೆ ಭರ್ಜರಿ ಬಾಡೂಟ ಆಯೋಜಿಸಲಾಗಿದೆ. ಎರಡೂವರೆ ಕ್ವಿಂಟಾಲ್ ಮಟನ್ ಬಿರಿಯಾನಿ, 50 ಕೆ ಜಿ ಚಿಕನ್ ಕಬಾಬ್ ಮಾಡಿಸಲಾಗಿದೆ. ಈ ಭರ್ಜರಿ ಬಾಡೂಟಕ್ಕೆ ಎಲ್ಲೆಡೆ ಆಕ್ಷೇಪ ವ್ಯಕ್ತವಾಗುತ್ತಿದೆ.
Last Updated : Feb 3, 2023, 8:34 PM IST