ಕರ್ನಾಟಕ

karnataka

ETV Bharat / videos

ಗಣೇಶ ಹಬ್ಬದ ದಿನದಂದೆ ಪೊಲೀಸ್​ ಠಾಣೆಯಲ್ಲಿ ಮಹಿಳಾ ಕಾನ್ಸ್‌ ಟೇಬಲ್​ಗೆ ಸೀಮಂತ ಕಾರ್ಯಕ್ರಮ: ವಿಡಿಯೋ - etv bharat kannada

🎬 Watch Now: Feature Video

ಗಣೇಶ ಹಬ್ಬದ ದಿನದಂದೆ ಪೊಲೀಸ್​ ಠಾಣೆಯಲ್ಲಿ ಮಹಿಳಾ ಪೇದೆಗೆ ಸೀಮಂತ ಕಾರ್ಯಕ್ರಮ: ವಿಡಿಯೋ

By ETV Bharat Karnataka Team

Published : Sep 18, 2023, 6:13 PM IST

ಚಿಕ್ಕಮಗಳೂರು: ಗೌರಿ - ಗಣೇಶ ಹಬ್ಬವಾದ ಇಂದು ಕಡೂರು ತಾಲೂಕಿನ ಬೀರೂರು ಪೊಲೀಸ್ ಠಾಣೆಯಲ್ಲಿ ಮಹಿಳಾ ಕಾನ್ಸ್‌ಟೇಬಲ್​ಗೆ ಸೀಮಂತ ಕಾರ್ಯಕ್ರಮವನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿ ನೆರವೇರಿಸಿದ್ದಾರೆ. ಹಲವು ವರ್ಷಗಳಿಂದ ಬೀರೂರು ಪೊಲೀಸ್​ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಕಾನ್ಸ್‌ಟೇಬಲ್ ಮಮತಾ ಅವರಿಗೆ ಮಡಿಲಿಗೆ ಅಕ್ಕಿ ತುಂಬಿ, ತಲೆಗೆ ಹೂ ಮುಡಿಸಿ, ಬಳೆ ತೊಡಿಸಿ ಅದ್ಧೂರಿಯಾಗಿ ಸೀಮಂತ ಮಾಡಲಾಗಿದೆ. ಸಾಮಾನ್ಯವಾಗಿ ಪೊಲೀಸರು ಎಂದರೆ ಆ ಕೆಲಸ ಈ ಕೆಲಸ ಎಂದು ಸದಾ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಇದರ ನಡುವೆಯೂ ಪೊಲೀಸ್ ಸಿಬ್ಬಂದಿ ಈ ಕಾರ್ಯ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ಪೊಲೀಸ್ ಠಾಣೆಯಲ್ಲೇ ಶಾಸ್ತ್ರೋಕ್ತವಾಗಿ ಸೀಮಂತ ನೆರವೇರಿಸಿದ ಸಹ ಸಿಬ್ಬಂದಿಗಳ ಕಾರ್ಯಕ್ಕೆ ಮಮತಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ಬೀರೂರು ಠಾಣೆಯಲ್ಲಿ ಮಮತಾ ಸೇವೆ ಸಲ್ಲಿಸುತ್ತಿದ್ದು, ಸಹ ಸಿಬ್ಬಂದಿಗಳಿಗೆ ಅಚ್ಚು ಮೆಚ್ಚಿನ ಸ್ನೇಹಿತೆಯಾಗಿ ಹಾಗೂ ಅಕ್ಕ ತಂಗಿಯಾಗಿ ಅವರೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೀರೂರು ಪೊಲೀಸರು ಠಾಣೆಯಲ್ಲಿಯೇ ಸಿಬ್ಬಂದಿಯೊಬ್ಬರಿಗೆ ಸೀಮಂತ ಕಾರ್ಯಕ್ರಮವನ್ನು ಮಾಡುವ ಮೂಲಕ ಕರ್ತವ್ಯದ ನಡುವೆ ಈ ರೀತಿಯ ಒಳ್ಳೆಯ ಕಾರ್ಯಗಳಿಗೂ ನಾಂದಿ ಹಾಡಿದ್ದಾರೆ.

ಇದನ್ನೂ ಓದಿ:ಕುಟುಂಬ ಸದಸ್ಯರ ಜೊತೆ ಗಣೇಶ ಚತುರ್ಥಿ ಆಚರಿಸಿದ ಬಿಎಸ್​ ಯಡಿಯೂರಪ್ಪ

ABOUT THE AUTHOR

...view details