ದೊಡ್ಡಬಳ್ಳಾಪುರದಲ್ಲಿ ಹೆಚ್ಚಾಗುತ್ತಿದೆ ಬೈಕ್ ವ್ಹೀಲಿಂಗ್ ಕ್ರೇಜ್: ಬೇಕಿದೆ ಕಡಿವಾಣ - ಬೈಕ್ ವ್ಹೀಲಿಂಗ್ ಕ್ರೇಜ್
Published : Dec 11, 2023, 2:36 PM IST
ದೊಡ್ಡಬಳ್ಳಾಪುರ :ವಾರಾಂತ್ಯ ಬಂದರೆ ಸಾಕು ದೊಡ್ಡಬಳ್ಳಾಪುರ ಸುತ್ತಮುತ್ತಲಿನ ಹೆದ್ದಾರಿಗಳಲ್ಲಿ ಬೈಕ್ ವ್ಹೀಲಿಂಗ್ ಮಾಡುವ ಪುಂಡರ ಹಾವಳಿ ಹೆಚ್ಚಾಗಿದ್ದು, ಅವರ ಹುಚ್ಚಾಟಕ್ಕೆ ವಾಹನ ಸವಾರರು ಆತಂಕಪಡುವಂತಾಗಿದೆ. ಬಹುತೇಕ ಬೆಂಗಳೂರಿನ ಪಡ್ಡೆಗಳಿಗೆ ಹೊರವಲಯವೇ ಬೈಕ್ ವ್ಹೀಲಿಂಗ್ ಮಾಡುವ ಹೆದ್ದಾರಿಗಳಾಗಿವೆ. ನಂದಿಬೆಟ್ಟ - ದೊಡ್ಡಬಳ್ಳಾಪುರ ರಸ್ತೆ, ಹೊಸಕೋಟೆ - ದೊಡ್ಡಬಳ್ಳಾಪುರ, ದೊಡ್ಡಬಳ್ಳಾಪುರ - ಹಿಂದೂಪುರ ಹೆದ್ದಾರಿ, ದೊಡ್ಡಬಳ್ಳಾಪುರ-ಹೊಸಹಳ್ಳಿ ರಸ್ತೆಯುದ್ದಕ್ಕೂ ವ್ಹೀಲಿಂಗ್ ಮಾಡುತ್ತಾರೆ. ಬೈಕ್ ವ್ಹೀಲಿಂಗ್ ಮಾಡುವುದು ಅಲ್ಲದೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಮತ್ತಷ್ಟು ಯುವಕರ ಮೇಲೆ ಪ್ರಭಾವ ಬೀರುತ್ತಿದ್ದಾರೆ.
ದೊಡ್ಡಬಳ್ಳಾಪುರ - ಹೊಸಕೋಟೆ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಯುವಕರ ಗ್ಯಾಂಗ್ಅನ್ನು ಸಾರ್ವಜನಿಕರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಯುವಕರ ಬೈಕ್ ವ್ಹೀಲಿಂಗ್ ಕ್ರೇಜ್ನಲ್ಲಿ ಯುವತಿಯರು ಸಹ ಭಾಗಿಯಾಗಿದ್ದಾರೆ. ಇದೇ ಬೈಕ್ ವ್ಹೀಲಿಂಗ್ ಕ್ರೇಜ್ ಈಗ ಸ್ಥಳೀಯ ಯುವಕರಿಗೂ ಪ್ರಚೋದನೆ ನೀಡುತ್ತಿದೆ. ಇದಕ್ಕೆಲ್ಲ ಪೊಲೀಸರು ಕಡಿವಾಣ ಹಾಕಬೇಕು. ಪೋಷಕರು ತಮ್ಮ ಮಕ್ಕಳಿಗೆ ಬುದ್ಧಿವಾದ ಹೇಳಬೇಕಿದೆ.
ಇದನ್ನೂ ಓದಿ :ಮಹಿಳೆಗೆ ಡಿಕ್ಕಿ ಹೊಡೆದು ಆಕೆಯ ಮೇಲೆ ಹರಿದ ಸರ್ಕಾರಿ ಬಸ್: ಸ್ಥಳದಲ್ಲೇ ಸಾವು, ಸಿಸಿಟಿವಿಯಲ್ಲಿ ದೃಶ್ಯ ಸೆರೆ