ಕರ್ನಾಟಕ

karnataka

ETV Bharat / videos

ಸ್ಕೂಟರ್ ಕಳವಿಗೆ ಬಂದು ಹೆಲ್ಮೆಟ್ ಹೊತ್ತೊಯ್ದರು: ಸಿಸಿಟಿವಿ ದೃಶ್ಯ - CCTV visuals found

By

Published : Sep 20, 2022, 8:19 PM IST

Updated : Feb 3, 2023, 8:28 PM IST

ಪುತ್ತೂರು (ದಕ್ಷಿಣಕನ್ನಡ): ಇಲ್ಲಿನ ಕುಂಬ್ರ ಎಂಬಲ್ಲಿ ನ್ಯೂ ರಾಯಲ್ ದರ್ಬಾರ್ ಹೋಟೆಲ್​ ಬಳಿ ನಿಲ್ಲಿಸಲಾಗಿದ್ದ ದ್ವಿಚಕ್ರವಾಹನವನ್ನು ಕಳವು ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ಸೆ 18 ರಂದು ರಾತ್ರಿ ಕಳವಿಗೆ ಯತ್ನ ನಡೆದಿದ್ದು, ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಾಯಲ್ ದರ್ಬಾರ್ ಹೋಟೆಲ್​ ಮಾಲೀಕ ಹಮೀದ್ ಅವರು ತನ್ನ ಸ್ಕೂಟರನ್ನು ಹೋಟೆಲ್​ ಮುಂಭಾಗದಲ್ಲಿ ನಿಲ್ಲಿಸಿ ಮಂಗಳೂರಿಗೆ ತೆರಳಿದ್ದರು. ಮಂಗಳೂರಿನಿಂದ ಬರುವಾಗ ತಡವಾಗಿದ್ದ ಕಾರಣ ಸ್ಕೂಟರ್ ಅನ್ನು ಮನೆಗೆ ಕೊಂಡು ಹೋಗಿರಲಿಲ್ಲ. ಅದೇ ದಿನ ರಾತ್ರಿ ಅಲ್ಲಿಗೆ ಸ್ಕೂಟರಿನಲ್ಲಿ ಬಂದ ಇಬ್ಬರು ಯುವಕರು ಸ್ಕೂಟರ್​​ ಕಳವು ಮಾಡಲು ಯತ್ನಿಸಿದ್ದಾರೆ. ಆದರೆ, ದ್ವಿಚಕ್ರ ವಾಹನ ಹ್ಯಾಂಡ್ ಲಾಕ್ ಆಗಿದ್ದ ಕಾರಣ, ಸ್ಕೂಟರಿನಲ್ಲಿದ್ದ ಹೆಲ್ಮೆಟ್​​ ಕಳವು ಮಾಡಿದ್ದಾರೆ. ಘಟನೆಯ ಸಂಬಂಧ ಗ್ರಾಮಾಂತರ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Last Updated : Feb 3, 2023, 8:28 PM IST

ABOUT THE AUTHOR

...view details