ಭೀಕರವಾಗಿ ಹರಿಯುತ್ತಿದ್ದ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರನ ರಕ್ಷಣೆ- VIDEO - ಭೀಕರವಾಗಿ ಹರಿಯುತ್ತಿದ್ದ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರ
ಚಿಕ್ಕಬಳ್ಳಾಪುರ: ಭೀಕರವಾಗಿ ಹರಿಯುತ್ತಿದ್ದ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರನನ್ನು ರಕ್ಷಣೆ ಮಾಡಲಾಗಿದೆ. ಜೆಸಿಬಿ ಯಂತ್ರದ ಮೂಲಕ ಅಗ್ನಿಶಾಮಕ ದಳ ರಕ್ಷಣೆ ಮಾಡಿದೆ. ಈ ಘಟನೆ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ನಡೆದಿದೆ. ನಗರದ ನಾಗೇರೆಡ್ಡಿ ಬಡಾವಣೆಯ ಸೇತುವೆ ಬಳಿ ಉತ್ತರ ಪಿನಾಕಿನಿ ನದಿಯ ನೀರು ರಭಸದಿಂದ ಹರಿಯುತ್ತಿತ್ತು. ಶಂಭುಕನಗರದ ನಿವಾಸಿ ರಾಮಚಂದ್ರಪ್ಪ ತನ್ನ ದ್ವಿಚಕ್ರ ವಾಹನದ ಮೂಲಕ ಸೇತುವೆ ದಾಟಲು ಯತ್ನಿಸಿದ್ದಾರೆ. ಈ ವೇಳೆ ನೀರಿನ ರಭಸ ಹೆಚ್ಚಾಗಿದ್ದು, ಈ ವೇಳೆ ಅನಾಹುತಕ್ಕೆ ಸಿಲುಕಿದ್ದರು.
Last Updated : Feb 3, 2023, 8:25 PM IST