ಬಿಜೆಪಿ ಮಹಿಳಾ ರಾಷ್ಟ್ರೀಯ ಮೋರ್ಚಾದಿಂದ ಬೃಹತ್ ಬೈಕ್ ರ್‍ಯಾಲಿ - tumkur bike rally
ತುಮಕೂರು: ಇಂದಿನಿಂದ ತುಮಕೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ನೂರಾರು ಮಂದಿ ಬೈಕ್ ರ್‍ಯಾಲಿ ನಡೆಸಿದರು. ನಗರದ ಟೌನ್ ಹಾಲ್ ಸರ್ಕಲ್ನಿಂದ ಸಿದ್ಧಗಂಗಾ ಮಠದವರೆಗೆ ಬೈಕ್ ರ್‍ಯಾಲಿ ನಡೆಸಲಾಯಿತು. ಮೋರ್ಚಾದ ರಾಷ್ಟ್ರೀಯ ಪ್ರಭಾರಿ ದುಷ್ಯಂತ ಕುಮಾರ್ ಗೌತಂ ಹಾಗೂ ಮಹಿಳಾ ಮೋರ್ಚಾದ ಅಧ್ಯಕ್ಷೆ ವಾನತಿ ಶ್ರೀನಿವಾಸನ್ ಭಾಗಿಯಾಗಿದ್ದರು. 37 ರಾಜ್ಯಗಳ ಮಹಿಳಾ ಘಟಕದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ಜೊತೆ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಹಾಗೂ ಜಿಲ್ಲಾ ಬಿಜೆಪಿ ಮುಖಂಡರು ಸಾಥ್ ನೀಡಿದರು.
Last Updated : Feb 3, 2023, 8:39 PM IST