120 ಕೆಜಿ ತೂಕದ ಬೈಕ್ ಹೊತ್ತು 30 ಸೆಕೆಂಡ್‌ನಲ್ಲಿ 100 ಮೀಟರ್ ಸಾಗಿದ ಪರಾಕ್ರಮಿ! - ಇಂಡಿಯಾ ಬುಕ್ ಆಫ್ ರೆಕಾರ್ಡ್
ಬಿಹಾರ: ಬಿಹಾರದ ಕೈಮೂರ್ ಜಿಲ್ಲೆಯ 'ಹ್ಯಾಮರ್ ಹೆಡ್‌ಮ್ಯಾನ್' ಎಂದೇ ಜನಪ್ರಿಯರಾಗಿರುವ ಧರ್ಮೇಂದ್ರ ಇದೀಗ ಮತ್ತೊಂದು ಸಾಹಸ ಮಾಡಿದ್ದಾರೆ. ಭುಜದ ಮೇಲೆ 115 ಸಿಸಿ 120 ಕೆ.ಜಿ ತೂಕದ ಬೈಕ್ ಹೊತ್ತುಕೊಂಡು 30 ಸೆಕೆಂಡ್ಗಳಲ್ಲಿ 100 ಮೀಟರ್ ದೂರ ಕ್ರಮಿಸಿ ಗಮನ ಸೆಳೆದಿದ್ದಾರೆ. ಡಿಸೆಂಬರ್ 31ರಂದು ತ್ರಿಪುರಾ ರಾಜಧಾನಿ ಅಗರ್ತಲಾದಲ್ಲಿ ನಡೆದ ಸ್ಪರ್ಧೆಯಲ್ಲಿ ಇವರು 21 ಪ್ರತಿಸ್ಪರ್ಧಿಗಳನ್ನು ಸೋಲಿಸಿ ಈ ಸಾಧನೆ ತೋರಿದರು. ಹ್ಯಾಮರ್ ಹೆಡ್‌ಮ್ಯಾನ್ ಸಾಹಸ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದೆ. 'ಈ ಸಾಧನೆಯ ನಂತರ ಬಹಳ ಉತ್ಸುಕನಾಗಿದ್ದೇನೆ. ದೇಶದ ಯುವಕರಿಗೂ ಇದು ಸ್ಫೂರ್ತಿಯಾಗಲಿ. ಈಗ ನಾನು ವಿಶ್ವದಾಖಲೆ ಮಾಡುವ ತುಡಿತ ಹೊಂದಿದ್ದೇನೆ' ಎಂದು ತ್ರಿಪುರಾ ಪೊಲೀಸ್ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಕೂಡಾ ಆಗಿರುವ ಧರ್ಮೇಂದ್ರ ಹೇಳಿದರು.
Last Updated : Feb 3, 2023, 8:38 PM IST