ಕರ್ನಾಟಕ

karnataka

ಶಿವನಮೂರ್ತಿ

ETV Bharat / videos

ಹೊಸಕೋಟೆ: 60 ಅಡಿ ಎತ್ತರದ 108 ಲಿಂಗಗಳಿಂದ ಶಿವನ ಮೂರ್ತಿ ನಿರ್ಮಾಣ - ಅವಿಮುಕ್ತೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹವನ

By

Published : Feb 17, 2023, 6:32 PM IST

ಹೊಸಕೋಟೆ:ನಾಳೆ ನಾಡಿನೆಲ್ಲೆಡೆ ಮಹಾಶಿವರಾತ್ರಿ ಸಂಭ್ರಮ. ಹೊಸಕೋಟೆ ನಗರದಲ್ಲಿ ಶಿವರಾತ್ರಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ನಗರದ ಚೆನ್ನಬೈರೇಗೌಡ ಕ್ರೀಡಾಂಗಣದಲ್ಲಿ ಉತ್ಸವಕ್ಕಾಗಿ 60 ಅಡಿ ಎತ್ತರದ 108 ಲಿಂಗಗಳನ್ನು ಒಳಗೊಂಡ ಶಿವನ ಮೂರ್ತಿ ನಿರ್ಮಿಸಲಾಗಿದೆ. 

ಇಂದಿನಿಂದ ಮೂರು ದಿನಗಳ ಶಿವರಾತ್ರಿ ಉತ್ಸವ ಆಯೋಜಿಸಲಾಗಿದ್ದು, ಇಂದು ಸಂಜೆ ಉತ್ಸವಕ್ಕೆ ಎಂಟಿಬಿ ನಾಗರಾಜ್ ಚಾಲನೆ ನೀಡುವರು. ಶಿವಲಿಂಗದ ಮುಂಭಾಗ ಬೃಹತ್ ವೇದಿಕೆ ಹಾಕಲಾಗಿದ್ದು, ಪ್ರಸಿದ್ದ ಕಲಾವಿದರನ್ನು ಕರೆಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಇಂದು ಅನುರಾಧ ಭಟ್ ಮತ್ತು ಹೇಮಂತ್ ತಂಡದವರಿಂದ ಮ್ಯೂಸಿಕಲ್ ನೈಟ್, ನಾಳೆ ಶಿವತಾಂಡವ ನೃತ್ಯ, ರಘು ದೀಕ್ಷಿತ್​​ ತಂಡದಿಂದ ಸಂಗೀತ ಕಾರ್ಯಕ್ರಮ, ಜಾಗರಣೆ ಅಂಗವಾಗಿ ಹರಿಕಥೆ, ಹಾಡುಗಾರಿಕೆ, ಮೃದಂಗ ಇನ್ನಿತರೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ನಾಳೆ ಗಿಚ್ಚಿ ಗಿಲಿಗಿಲಿ ಹಾಗೂ ಸರಿಗಮಪ ತಂಡದವರಿಂದ ಹಾಸ್ಯ ಹಾಗೂ ಸಂಗೀತ, ನೃತ್ಯ ಕಾರ್ಯಕ್ರಮವಿದೆ. ನಗರದ ಅವಿಮುಕ್ತೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹವನ ನಡೆಯಲಿದೆ.

ಇದನ್ನೂ ಓದಿ:5 ಲಕ್ಷ ರುದ್ರಾಕ್ಷಿಯಿಂದ ಮೈದಳೆದ 21 ಅಡಿ ಎತ್ತರದ ಶಿವಲಿಂಗ: ವಿಡಿಯೋ

ABOUT THE AUTHOR

...view details