ಬೀದರ್ : ವಿವಿಧ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಖದೀಮರ ಸೆರೆ - ಈಟಿವಿ ಭಾರತ ಕನ್ನಡ
ಬೀದರ್ :ನಗರದಲ್ಲಿ ಇತ್ತೀಚೆಗೆ ನಡೆದಿದ್ದ ಸರಗಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನಗರದಲ್ಲಿ ಒಂಟಿಯಾಗಿ ಓಡಾಡುತ್ತಿದ್ದ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ ಖದೀಮರು ಮಹಿಳೆಯರ ಕುತ್ತಿಗೆಯಲ್ಲಿದ್ದ ಸರವನ್ನು ಕದ್ದು ಪರಾರಿಯಾಗುತ್ತಿದ್ದರು. ಈ ಖದೀಮರು ಕಳ್ಳತನಕ್ಕೆ ಕದ್ದ ಬೈಕ್‌ಗಳನ್ನು ಬಳಸುತ್ತಿದ್ದರು. ಬಳಿಕ ಕೃತ್ಯಕ್ಕೆ ಬಳಸಿದ ಬೈಕ್‌ಗಳನ್ನು ಕಾಡಿನಲ್ಲಿ ಬಿಟ್ಟು ಮತ್ತೆ ನಗರದಲ್ಲಿ ಸಾಮಾನ್ಯರಂತೆ ಓಡಾಡಿಕೊಂಡಿರುತ್ತಿದ್ದರು.
ಸದ್ಯ ಬಂಧಿತ ಆರೋಪಿಗಳಿಂದ 11,70,000 ಮೌಲ್ಯದ ಒಂದು ಮಾಂಗಲ್ಯ ಸರ ಸೇರಿ ಮೂರು ಬಂಗಾರದ ಸರಗಳು ಹಾಗು ಒಂದು ಐಪೋನ್ ಮತ್ತು ಮೂರು ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಎಸ್‌ಪಿ ಚನ್ನಬಸವಣ್ಣ ಲಂಗೋಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಕೃತ್ಯ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ :ಬ್ಯಾಟರಿ ಸಮಸ್ಯೆ: ಎರಡು ಸ್ಲೀಪರ್ ಬಸ್ಗಳು ಬೆಂಕಿಯಿಂದ ಸುಟ್ಟು ಕರಕಲು