ಶ್ರಾವಣ ಸೋಮವಾರ: ಉಜ್ಜಯಿನಿ ಶ್ರೀ ಮಹಾಕಾಳೇಶ್ವರ ದೇವಸ್ಥಾನದಲ್ಲಿ ನೆರವೇರಿದ 'ಭಸ್ಮಾರತಿ' - ಉಜ್ಜಯಿನಿ ಶ್ರೀ ಮಹಾಕಾಳೇಶ್ವರ ದೇವಸ್ಥಾನ
ಮಧ್ಯಪ್ರದೇಶ: ಈ ವರ್ಷದ ಶ್ರಾವಣ ಮಾಸವು ಇಂದಿನಿಂದ ಪ್ರಾರಂಭವಾಗಿದ್ದು ಆಗಸ್ಟ್ 12 ರಂದು ಕೊನೆಗೊಳ್ಳುತ್ತಿದೆ. ಈ ಮಾಸದಲ್ಲಿ ಶಿವನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಸನಾತನ ಧರ್ಮದ ಪೌರಾಣಿಕ ನಂಬಿಕೆಗಳ ಪ್ರಕಾರ ಶ್ರಾವಣ ತಿಂಗಳನ್ನು ಶಿವನ ತಿಂಗಳೆಂದೇ ಪರಿಗಣಿಸುವುದುಂಟು. ಹಾಗಾಗಿ, ಶಿವ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗುತ್ತವೆ. ಮಧ್ಯಪ್ರದೇಶದ ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಇಂದು ಬೆಳಗ್ಗೆ ವಿಶೇಷ ಪೂಜೆ ಮತ್ತು 'ಭಸ್ಮಾರತಿ' ನಡೆಯಿತು. ಸಾವಿರಾರು ಭಕ್ತರು ದೇಗುಲಕ್ಕೆ ಆಗಮಿಸಿ ಜ್ಯೋತಿರ್ಲಿಂಗದ ದರ್ಶನ ಪಡೆದು ಭಗವಂತನ ಕೃಪೆಗೆ ಪಾತ್ರರಾಗುತ್ತಿದ್ದಾರೆ.
Last Updated : Feb 3, 2023, 8:24 PM IST