ಕರ್ನಾಟಕ

karnataka

ರಾಮನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ರೋಡ್ ಶೋ

ETV Bharat / videos

ಭಾರತ್ ಜೋಡೋ ಯಾತ್ರೆ: ರಾಮನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ರೋಡ್ ಶೋ - etv bharath kannada news

By ETV Bharat Karnataka Team

Published : Sep 7, 2023, 9:36 PM IST

ರಾಮನಗರ :ಭಾರತ್ ಜೋಡೋ ಯಾತ್ರೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರೇಷ್ಮೆನಗರಿ ರಾಮನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ರೋಡ್ ಶೋ ಹಮ್ಮಿಕೊಳ್ಳಲಾಗಿತ್ತು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. 

ರಾಮನಗರ ಜಿಲ್ಲಾಧಿಕಾರಿ ಕಚೇರಿಯಿಂದ ಯಾತ್ರೆ ಆರಂಭಗೊಂಡು, ಹಳೆ ಬೆಂಗಳೂರು ‌ಮೈಸೂರು ಹೆದ್ದಾರಿಯ ಮೂಲಕ ಸುಮಾರು 3 ಕಿ. ಮೀ ಹೆದ್ದಾರಿಯಲ್ಲಿ ಸಂಚರಿಸಲಾಯಿತು. ಸಮಯಾವಕಾಶ ಕೊರತೆ ಹಿನ್ನಲೆ ಹಾಗೂ ಮಳೆಯ ಮುನ್ಸೂಚನೆ ಹಿನ್ನೆಲೆ ಪಾದಯಾತ್ರೆ ಬದಲು ರೋಡ್ ಶೋ ನಡೆಸಲಾಯಿತು. 

ಇದನ್ನೂ ಓದಿ:ಬೆಂಗಳೂರಿನಲ್ಲಿ ʼಕನ್ನಡಾಂಬೆ ಭುವನೇಶ್ವರಿʼ ಕಂಚಿನ ಪ್ರತಿಮೆ: 2024 ನವೆಂಬರ್​ನಲ್ಲಿ ಪ್ರತಿಮೆ ಅನಾವರಣಕ್ಕೆ ತೀರ್ಮಾನ.. ಸಚಿವ ತಂಗಡಗಿ

ಭಾರತ್ ಜೋಡೋ ಯಾತ್ರೆಗೆ ಒಂದು ವರ್ಷ ಸಂದ ಹಿನ್ನೆಲೆಯಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಯಾತ್ರೆಯಲ್ಲಿ ಭಾಗವಹಿಸಿದ್ದರು. ಹಾಗೆಯೇ, ಪಾದಯಾತ್ರೆಯಲ್ಲಿ ಸಚಿವ ಮಾಂಕಾಳ ವೈದ್ಯ, ಶಾಸಕರಾದ ಇಕ್ಬಾಲ್ ಹುಸೈನ್, ಬಾಲಕೃಷ್ಣ, ಎಂಎಲ್​ಸಿ ಎಸ್. ರವಿ ಮತ್ತಿತರರು ಭಾಗವಹಿಸಿದ್ದರು.

ಇದನ್ನೂ ಓದಿ:ದೌರ್ಜನ್ಯ ತಡೆಗೆ ಸಂಬಂಧಪಟ್ಟ ಇಲಾಖೆಗಳ ನಡುವೆ ಸಮನ್ವಯ ಇರಲಿ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details