ಭಾರತ್ ಜೋಡೋ ಯಾತ್ರೆ.. ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ - ಈಟಿವಿ ಭಾರತ ಕನ್ನಡ
ನಾರಾಯಣಪೇಟೆ(ತೆಲಂಗಾಣ): ಕೇರಳದಿಂದವಾದ ಆರಂಭವಾದ ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಕರ್ನಾಟಕ ಮೂಲಕ ಈಗ ತೆಲಂಗಾಣ ತಲುಪಿದೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಹೋದಲ್ಲೆಲ್ಲಾ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇಂದಿನ ನಡಿಗೆಗೆ ಮಾಜಿ ಭಾರತೀಯ ಕ್ರಿಕೆಟ್ ನಾಯಕ ಮೊಹಮ್ಮದ್ ಅಜರುದ್ದೀನ್ ಸೇರಿಕೊಂಡಿದ್ದಾರೆ. ಅಜರುದ್ದೀನ್ ತೆಲಂಗಾಣದ ಪ್ರದೇಶ ಕಾಂಗ್ರೆಸ್ ಕಮಿಟಿಯ ಕಾರ್ಯಾಧ್ಯಕ್ಷರು ಆಗಿದ್ದಾರೆ. ನಿನ್ನೆ ಮಖ್ತಲ್ನಿಂದ ನಡಿಗೆ ಆರಂಭವಾಗಿದ್ದು ಮರಿಕಲ್ ತಲುಪಿತ್ತು. ಇಂದು ಮರಿಕಲ್ನಿಂದ ಮೆಹಬೂಬ್ ನಗರಕ್ಕೆ ಪಾದಯಾತ್ರೆ ನಡೆಯಲಿದೆ.
Last Updated : Feb 3, 2023, 8:30 PM IST