ಅಧ್ಯಯನ, ಕಠಿಣ ಪರಿಶ್ರಮ ಮತ್ತು ಯಶಸ್ಸಿಗೆ ಶ್ರಮಿಸುವುದು ನನ್ನ ಸಂದೇಶ.. ಅಥ್ಲೀಟ್ ಭಗವಾನಿ ದೇವಿ ದಾಗರ್ - ಅಥ್ಲೀಟ್ ಭಗವಾನಿ ದೇವಿ ದಾಗರ್
ನವದೆಹಲಿ: ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ ಒಳಾಂಗಣ ಚಾಂಪಿಯನ್‌ಶಿಪ್-2023ರಲ್ಲಿ 3 ಚಿನ್ನದ ಪದಕಗಳನ್ನು ಗೆದ್ದ ಭಾರತದ 95 ವರ್ಷದ ಅಥ್ಲೀಟ್ ಭಗವಾನಿ ದೇವಿ ದಾಗರ್ ಭಾರತಕ್ಕೆ ಮರಳಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು "ನನ್ನ ಸಂದೇಶವೆಂದರೆ ಅಧ್ಯಯನ, ಕಠಿಣ ಪರಿಶ್ರಮ ಮತ್ತು ಯಶಸ್ಸಿಗೆ ಶ್ರಮಿಸುವುದು. ಜತೆಗೆ ಪೋಷಕರು ಮಕ್ಕಳನ್ನು ಕ್ರೀಡೆಗೆ ಬೆಂಬಲಿಸಬೇಕು ಮತ್ತು ತಮ್ಮ ದೇಶಕ್ಕಾಗಿ ಪದಕ ಪಡೆಯಲು ಅವರನ್ನು ಸಿದ್ಧಪಡಿಸಬೇಕು" ಎಂದಿದ್ದಾರೆ.
ಬುಧವಾರ (ಮಾ.29) ಪೋಲೆಂಡ್‌ನ ಟೊರುನ್‌ನಲ್ಲಿ ನಡೆದ 9ನೇ ವಿಶ್ವ ಮಾಸ್ಟರ್ ಅಥ್ಲೆಟಿಕ್ಸ್ ಒಳಾಂಗಣ ಚಾಂಪಿಯನ್‌ಶಿಪ್ 2023ರಲ್ಲಿ ಡಿಸ್ಕಸ್ ಥ್ರೋನಲ್ಲಿ ಹರಿಯಾಣದ ಅನುಭವಿ ಅಥ್ಲೀಟ್ ಭಗವಾನಿ ದೇವಿ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅವರು 60 ಮೀಟರ್ ಓಟ, ಶಾಟ್‌ಪುಟ್ ಮತ್ತು ಡಿಸ್ಕಸ್ ಎಸೆತದಲ್ಲಿ ಪದಕಗಳನ್ನು ಪಡೆದರು. ಇದಕ್ಕೂ ಮೊದಲು, ಫಿನ್‌ಲ್ಯಾಂಡ್‌ನಲ್ಲಿ ನಡೆದ 2023ರ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 90-94 ವಯಸ್ಸಿನ ವಿಭಾಗದಲ್ಲಿ 100 ಮೀಟರ್ ಓಟವನ್ನು ವೇಗವಾಗಿ ಓಡಿ ಭಾರತಕ್ಕೆ ಚಿನ್ನದ ಪದಕವನ್ನು ತಂದು ಕೊಟ್ಟಿದ್ದಾರೆ.
ಇದನ್ನೂ ಓದಿ:ಭಾರತದ ಕೀರ್ತಿ ಪತಾಕೆ ಹಾರಿಸಿದ 94ರ ವೃದ್ಧೆ: ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ನಲ್ಲಿ ಚಿನ್ನ,ಕಂಚು ಗೆದ್ದ ಭಗವಾನಿ