ಬೆಂಗಳೂರು: ಅದ್ಧೂರಿಯಾಗಿ ನಡೆಯುತ್ತಿರುವ ವಿಶ್ವದ ಅತಿ ದೊಡ್ಡ ಕೇಕ್ ಶೋನ ಝಲಕ್ ನೋಡಿ..
Published : Dec 18, 2023, 9:11 PM IST
ಬೆಂಗಳೂರು: ನಗರದ ಸೆಂಟ್ ಜೋಸೆಫ್ ಶಾಲಾ ಆವರಣದಲ್ಲಿ ಡಿಸೆಂಬರ್ 15ರಿಂದ ನಡೆಯುತ್ತಿರುವ ವಿಶ್ವದ ಅತಿ ದೊಡ್ಡ ಕೇಕ್ ಶೋ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ನವದೆಹಲಿಯಲ್ಲಿ ನಿರ್ಮಿಸಲಾಗಿರುವ ನೂತನ ಸಂಸತ್ ಭವನದ ಮಾದರಿಯ ಕೇಕ್, ಚಂದ್ರಯಾನ 3ರ ವಿನ್ಯಾಸದ ಕೇಕ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ‘ಶಕ್ತಿ’ ಕೇಕ್.. ಹೀಗೆ 2023ನೇ ಸಾಲಿನಲ್ಲಿ ಪ್ರಖ್ಯಾತಿಗೊಂಡ ವಿವಿಧ ವಿಷಯಗಳನ್ನು ಕೇಕ್ನಲ್ಲೇ ನಿರ್ಮಿಸಲಾಗಿದೆ.
ವಿಶೇಷವಾಗಿ ಕೇಕ್ ಶೋನ ಕೇಂದ್ರಬಿಂದುವಾಗಿ 2023ರಲ್ಲಿ ಉದ್ಘಾಟನೆಯಾದ ದೆಹಲಿಯ ನೂತನ ಸಂಸತ್ ಭವನ ಮಾದರಿ ಕಾಣಸಿಗುತ್ತಿದೆ. 1,120 ಕೆ.ಜಿ ಕೇಕ್‌ನಲ್ಲಿ ಇದನ್ನು ನಿರ್ಮಿಸಲಾಗಿದೆ. ಈ ಮಾದರಿಯು 14 ಅಡಿ ಉದ್ದ, ಅಗಲ ಹಾಗೂ 9 ಅಡಿ ಎತ್ತರ ಹೊಂದಿದೆ. ಸಂಸತ್ ಭವನದ ಸೊಬಗು ಮತ್ತು ಭವ್ಯತೆ ಪ್ರತಿ ಸಕ್ಕರೆ ಹರಳಿನಲ್ಲಿ ಸೆರೆಹಿಡಿಯಲಾಗಿದೆ. ಎರಡೂವರೆ ತಿಂಗಳಿನಲ್ಲಿ ಈ ಮಾದರಿ ತಯಾರಿಸಲಾಗಿದೆ.
ಕ್ರಿಸ್ಮಸ್, ಹೊಸ ವರ್ಷಾಚರಣೆ ಸಲುವಾಗಿ ಜನವರಿ 1ರವರೆಗೆ ನಡೆಯುತ್ತಿರುವ ಈ ಕೇಕ್ ಶೋನ ಉಸ್ತುವಾರಿಯನ್ನು ಎನ್ ಡೈರಿ ಫಾರ್ಮ್‌ನ ಸಿ.ರಾಮಚಂದ್ರನ್ ವಹಿಸಿದ್ದು, ಇನ್‌ಸ್ಟಿಟ್ಯೂಟ್ ಆಫ್ ಬೇಕಿಂಗ್ ಮತ್ತು ಕೇಕ್ ಆರ್ಟ್(ಐಬಿಸಿಎ) ಮತ್ತು ಮೈ ಬೇಕರ್ಸ್ ಮಾರ್ಟ್ ವಿಶ್ವದ ಅತಿ ದೊಡ್ಡ ಕೇಕ್ ಶೋ ನಡೆಸುತ್ತಿವೆ. ಇಲ್ಲಿ 23 ಪ್ರಕಾರದ 6,062 ಕೆ.ಜಿಗೂ ಹೆಚ್ಚಿನ ಕೇಕ್ ಇರಿಸಲಾಗಿದೆ.
ಇದನ್ನೂ ಓದಿ:ಬೆಂಗಳೂರು ಕೇಕ್ ಶೋ: ಜನರ ಗಮನ ಸೆಳೆದ ನೂತನ ಸಂಸತ್ ಭವನದ ಮಾದರಿ