ಬೆಳ್ತಂಗಡಿ ಸೋಮಾವತಿ ನದಿಗೆ ದುಷ್ಕರ್ಮಿಗಳಿಂದ ವಿಷಪ್ರಾಶನ , ಸಾವಿರಾರು ಮೀನುಗಳ ಮಾರಣಹೋಮ
ಬೆಳ್ತಂಗಡಿ: ನಗರಕ್ಕೆ ಸಮೀಪದಲ್ಲೇ ಇರುವ ಸೋಮಾವತಿ ನದಿಗೆ ದುಷ್ಕರ್ಮಿಗಳು ವಿಷ ಹಾಕಿದ ಪರಿಣಾಮ ಸಾವಿರಾರು ಮೀನುಗಳ ಮಾರಣಹೋಮ ನಡೆದಿದೆ.
ಬೆಳ್ತಂಗಡಿ ನಗರಕ್ಕೆ ನೀರು ಸರಬರಾಜು ಆಗುತಿದ್ದ ಸೋಮವತಿ ದೊಡ್ಡ ಹಳ್ಳಕ್ಕೆ ಕಳೆದ ರಾತ್ರಿ ಯಾರೋ ವಿಷ ಹಾಕಿದ್ದು, ಇದರಿಂದ ಇಲ್ಲಿ ರಾಶಿ ರಾಶಿ ಮೀನುಗಳು ಸತ್ತು ಬಿದ್ದಿವೆ. ಅಷ್ಟೇ ಅಲ್ಲದೇ ಸೋಮಾವತಿ ನದಿಯಿಂದ ಬೆಳ್ತಂಗಡಿ ಪಟ್ಟಣಕ್ಕೆ ಕುಡಿವ ನೀರು ಪೂರೈಕೆ ಆಗುತ್ತಿದೆ.
ಪ್ರತಿ ದಿನ 10 ಲಕ್ಷ ಲೀಟರ್ ನೀರಿನ ಅವಶ್ಯಕತೆಯಿದೆ. ಈಗಾಗಲೇ ನಗರ ಪಂಚಾಯತ್ ಅಧಿಕಾರಿಗಳು ಸ್ಥಳಕ್ಜೆ ಆಗಮಿಸಿ ಪರಿಶೀಲನೆ ನಡೆಸಿದ್ದು, ನೀರು ಸರಬರಾಜು ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಪಟ್ಟಣ ಪಂಚಾಯತ್ ದೂರು ದಾಖಲಾಗಿದೆ.
ಈಗಾಗಲೇ ಬಿರು ಬೇಸುಗೆಯಿಂದ ಸೋಮಾವತಿ ನದಿ ನೀರು ಬತ್ತಿ ಹೋಗಿದ್ದು, ಜೀವಜಲದ ಕೊರತೆಯನ್ನು ಜನರು ಎದುರಿಸುತ್ತಿದ್ದಾರೆ. ಇಂತಹದರಲ್ಲಿ ಸಮೀಪದ ಸೋಮಾವತಿ ನದಿಗೆ ದುಷ್ಕರ್ಮಿಗಳ ವಿಷಪ್ರಾಶನ ಮಾಡಿರುವ ಅಮಾನುಷ ಕೃತ್ಯದ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂಓದಿ:ಸಿಂಗಾಪುರದಲ್ಲಿ ಸಹೋದ್ಯೋಗಿ ಜೊತೆ ಸ್ವಂತ ಸೊಸೆ ಮದುವೆ ಮಾಡಿದ್ದ ಭಾರತೀಯ ವ್ಯಕ್ತಿಗೆ ಜೈಲು ಶಿಕ್ಷೆ