ಹೆದ್ದಾರಿಯಲ್ಲಿ ಬಿಯರ್ ಸಾಗಿಸುತ್ತಿದ್ದ ವಾಹನ ಪಲ್ಟಿ; ಮುಗಿಬಿದ್ದು ಬಾಟಲಿ ಕದ್ದೊಯ್ದ ಜನರು- ವಿಡಿಯೋ - ಈಟಿವಿ ಭಾರತ್ ಕನ್ನಡ ನ್ಯೂಸ್
ಆಂಧ್ರ ಪ್ರದೇಶ :ಸುಮಾರು200 ಕೇಸ್ ಬಿಯರ್ ಬಾಟಲಿಗಳಿದ್ದ ವಾಹನವೊಂದು ರಸ್ತೆಯಲ್ಲಿ ಪಲ್ಟಿಯಾದ ಘಟನೆ ಆಂಧ್ರ ಪ್ರದೇಶದ ಅನಕಪಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ನಡೆಯಿತು. ಈ ವಿಷಯ ತಿಳಿದ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಆಗಮಿಸಿ ಕೈಗೆ ಸಿಕ್ಕಷ್ಟು ಬಿಯರ್ ಬಾಟಲಿಗಳನ್ನು ಕದ್ದೊಯ್ದರು. ಘಟನೆಯ ವಿಡಿಯೋ ವೈರಲ್ ಆಗಿದೆ. ಜನರು ನಾ ಮುಂದು ತಾ ಮುಂದೆ ಎನ್ನುವಂತೆ ಮುಗಿಬಿದ್ದು ಬಾಟಲಿಗಳನ್ನು ಹೊತ್ತೊಯ್ಯುವ ದೃಶ್ಯವನ್ನು ನೋಡಬಹುದು.
ಇದನ್ನೂ ಓದಿ :ಒಡಿಶಾ ರೈಲು ದುರಂತ: ಮೊದಲ FIR ದಾಖಲಿಸಿದ ಸಿಬಿಐ; ತಪ್ಪು ಸಾಬೀತಾದರೆ ಗರಿಷ್ಠ ಶಿಕ್ಷೆ ಎಷ್ಟು ಗೊತ್ತೇ!
ಸ್ಥಳೀಯರು ಟ್ರಕ್ ಚಾಲಕ ಮತ್ತು ಕ್ಲೀನರ್‌ಗೆ ಸಹಾಯ ಮಾಡುವ ಬದಲು ಬಿಯರ್ ಬಾಟಲ್ಗಳನ್ನು ಕದಿಯುವುದರಲ್ಲೇ ನಿರತರಾಗಿದ್ದರು. ಘಟನೆಯಲ್ಲಿ ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಾಲಕ ಮತ್ತು ಕ್ಲೀನರ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ :ಪೋಷಕರು ಮದುವೆಗೆ ಒಪ್ಪದ ಕಾರಣ ಪ್ರೇಮಿಗಳು ಬಸ್ನಲ್ಲಿ ಆತ್ಮಹತ್ಯೆಗೆ ಯತ್ನ.. ಯುವತಿ ಸಾವು