ಕರ್ನಾಟಕ

karnataka

ETV Bharat / videos

ನೀರಿನ ಟ್ಯಾಂಕ್​​​​​​ ಏರಿ ಜೇನು ಸವಿದ ಕರಡಿಗಳು ..ವಿಡಿಯೋ - ಈಟಿವಿ ಭಾರತ ಕನ್ನಡ ನ್ಯೂಸ್​​​

By

Published : Oct 10, 2022, 4:01 PM IST

Updated : Feb 3, 2023, 8:29 PM IST

ಕೊರಿಯಾ (ಛತ್ತೀಸ್‌ಗಢ) : ಮೂರು ಕರಡಿಗಳು ನೀರಿನ ಟ್ಯಾಂಕಿನ ಮೇಲೆ ಹತ್ತಿ ಜೇನು ತಿನ್ನುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೂರು ಕರಡಿಗಳು ನೀರಿನ ಟ್ಯಾಂಕಿನ ಮೇಲಿದ್ದ ಜೇನನ್ನು ತಿನ್ನಲು ಮೆಟ್ಟಿಲುಗಳನ್ನು ಹತ್ತಿ ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಎಲ್ಲಿಂದ ಬಂದಿದೆ ಎಂಬುದು ಖಚಿತವಾಗಿ ತಿಳಿದಿಲ್ಲವಾದರೂ, ಕೆಲವರು ಇದು ಕೊರಿಯಾ ಜಿಲ್ಲೆಯ ಘಟನೆ ಮತ್ತೆ ಕೆಲವರು ಕಂಕೇರ್‌ನ ಆರ್‌ಇಎಸ್ ಕಾಲೋನಿ ನಡೆದ ಘಟನೆ ಎಂದು ಹೇಳಿದ್ದಾರೆ. ಅಲ್ಲದೇ ಇಲ್ಲಿನ ಜನ ವಸತಿ ಪ್ರದೇಶಕ್ಕೆ ಕರಡಿಗಳು ಎಲ್ಲಿಂದ ಬಂದವು ಎಂಬುದು ಜನರ ಕುತೂಹಲಕ್ಕೆ ಕಾರಣವಾಗಿತ್ತು. ಇನ್ನು ಕರಡಿಗಳು ಜೇನುಗೂಡನ್ನು ಎಳೆದು, ಜೇನುನೊಣಗಳನ್ನು ಚದುರಿಸಿ ಜೇನುತುಪ್ಪವನ್ನು ಸವಿಯುವ ದೃಶ್ಯವನ್ನು ಅಪರಿಚಿತರು ಸೆರೆ ಹಿಡಿದಿದ್ದಾರೆ.
Last Updated : Feb 3, 2023, 8:29 PM IST

ABOUT THE AUTHOR

...view details