ಕರ್ನಾಟಕ

karnataka

ಮಧ್ಯರಾತ್ರಿ ತಿರುಮಲದ ಕಾಲುದಾರಿಯಲ್ಲಿ ಕರಡಿ ಪ್ರತ್ಯಕ್ಷ..!

ETV Bharat / videos

ಮಧ್ಯರಾತ್ರಿ ತಿರುಮಲದ ಕಾಲುದಾರಿಯಲ್ಲಿ ಕರಡಿ ಪ್ರತ್ಯಕ್ಷ.. - Bear in Tirumala walking path

By

Published : Aug 1, 2023, 7:46 PM IST

ತಿರುಮಲ(ಆಂಧ್ರಪ್ರದೇಶ):ತಿರುಮಲದ ಕಾಲುದಾರಿಯಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿದೆ. ಕೆಲವೇ ಕ್ಷಣಗಳಲ್ಲಿ ಕಾಲುದಾರಿಯನ್ನು ದಾಟಿಕೊಂಡು ಹೋಯಿತು. ಭಕ್ತರು ಕರಡಿಯ ದೃಶ್ಯಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ಜಿಂಕೆ ಪಾರ್ಕ್ ಬಳಿ ಕರಡಿಯೊಂದು ಓಡಾಡಿದೆ. ಅದು ಮೆಟ್ಟಿಲುಗಳ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟಿ ಹತ್ತಿರದ ಪೊದೆಗಳಿಗೆ ಹೋಯಿತು.

ಕಳೆದ ಕೆಲ ವರ್ಷಗಳಿಂದ ಘಾಟ್ ರಸ್ತೆಗಳಲ್ಲಿ ಚಿರತೆ, ಕರಡಿಗಳ ಓಡಾಟ ಹೆಚ್ಚಾಗಿದ್ದು, ಇದರಿಂದ ಭಕ್ತರಲ್ಲಿ ಆತಂಕ ಮೂಡಿಸಿದೆ. ಕಳೆದ ತಿಂಗಳು ಮೂರು ವರ್ಷದ ಬಾಲಕನ ಮೇಲೆ ಚಿರತೆ ದಾಳಿ ಮಾಡಿದ ಘಟನೆ ಮಾಸುವ ಮುನ್ನವೇ ಕರಡಿ ಕಾಣಿಸಿಕೊಂಡಿದ್ದು, ಭಕ್ತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಚಿರತೆ ದಾಳಿ ಬಳಿಕ, ಅಧಿಕಾರಿಗಳು ಚಿರತೆಯನ್ನು ಹಿಡಿದಿದ್ದು, ಇದೀಗ ಮತ್ತೆ ಕರಡಿಯ ಕುರುಹು ಬೆಳಕಿಗೆ ಬಂದಿದೆ.

ಇದರಿಂದಾಗಿ ಭದ್ರತಾ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕಾಲಕಾಲಕ್ಕೆ ಸೈರನ್ ಮೊಳಗಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಇದನ್ನೂ ಓದಿ:ತುಮಕೂರು: ರಾತ್ರಿಯಾಗುತ್ತಿದ್ದಂತೆ ಗ್ರಾಮದೊಳಗೆ ನುಗ್ಗಿ ಅವಾಂತರ ಸೃಷ್ಟಿಸುತ್ತಿರುವ ಕರಡಿ.. ಜನರಲ್ಲಿ ಆತಂಕ

ABOUT THE AUTHOR

...view details