ಕರ್ನಾಟಕ

karnataka

ಕೋಳಿ ಹಿಡಿಯಲು ಹೋಗಿ ಬಾವಿಗೆ ಬಿದ್ದ ಕರಡಿ

ETV Bharat / videos

ಕೋಳಿಗಳನ್ನು ಬೆನ್ನಟ್ಟಿ ಬಾವಿಗೆ ಬಿದ್ದ ಕರಡಿ; ಮೇಲಕ್ಕೆತ್ತಿದರೂ ಬದುಕಲಿಲ್ಲ- ವಿಡಿಯೋ - ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ

By

Published : Apr 20, 2023, 5:46 PM IST

ತಿರುವನಂತಪುರ:ಇಲ್ಲಿನ ಕಟ್ಟಕ್ಕಡದ ವಸತಿ ಪ್ರದೇಶದಲ್ಲಿದ್ದ ಬಾವಿಗೆ ಕರಡಿ ಬಿದ್ದಿದ್ದು, ಸುಮಾರು ಒಂದು ಗಂಟೆ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ ಹೊರತೆಗೆಯಲಾಯಿತು. ಆದರೆ, ಕರಡಿ ಬದುಕಲಿಲ್ಲ. ವೆಳ್ಳನಾಡು ಮೂಲದ ಅರುಣ್ ಎಂಬವರ ಮನೆ ಬಾವಿಗೆ ಕರಡಿ ಬಿದ್ದಿದೆ. ರಾತ್ರಿ 12 ರ ಸುಮಾರಿಗೆ ಸಮೀಪದ ಮನೆಯೊಂದರಲ್ಲಿದ್ದ ಕೋಳಿಗಳನ್ನು ಬೇಟೆಯಾಡಲು ಕಾಡಿನಿಂದ ವಸತಿ ಪ್ರದೇಶಕ್ಕೆ ದಾಳಿ ಮಾಡಿತ್ತು ಎಂದು ತಿಳಿದುಬಂದಿದೆ.

ಬೇಟೆಯಾಡುವಾಗ ಕೋಳಿಗಳು ಬಾವಿಯ ಅಂಚಿನಲ್ಲಿ ಹಾರಿವೆ. ಅವುಗಳನ್ನು ಬೆನ್ನಟ್ಟಿದ ಕರಡಿ ತಾನೂ ಬಾವಿಯ ಅಂಚಿನಲ್ಲಿ ಹಾರಿ, ಆಯತಪ್ಪಿ ಬಾವಿಗೆ ಬಿದ್ದಿದೆ. ಸದ್ದು ಕೇಳಿ ಓಡಿಬಂದ ಮನೆಯವರು ಬಾವಿಯೊಳಗೆ ನೋಡಿದಾಗ ಕರಡಿ ಬಿದ್ದರುವುದು ಗೊತ್ತಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಆರ್‌ಆರ್‌ಟಿ ತಂಡ ಸುಮಾರು ಒಂದು ಗಂಟೆ ರಕ್ಷಣಾ ಕಾರ್ಯಾಚರಣೆ ನಡೆಸಿ, ಕರಡಿಯನ್ನು ಬಾವಿಯಿಂದ ಹೊರಕ್ಕೆ ತಂದರು. ಬಾವಿಯಲ್ಲಿದ್ದ ನೀರು ಖಾಲಿ ಮಾಡಿ ಕರಡಿಯನ್ನು ಹೊರಕ್ಕೆ ತರಬೇಕಾಯಿತು. ಸುಮಾರು ಹೊತ್ತು ನೀರಲ್ಲಿ ಮುಳುಗಿ, ಏಳುತ್ತಿದ್ದ ಕರಡಿಗೆ ಹೊರಬಂದ ತಕ್ಷಣ ಟ್ರ್ಯಾಂಕ್ವಿಲೈಜರ್‌ಗಳನ್ನು ನೀಡಿ ರಕ್ಷಿಸುವ ಪ್ರಯತ್ನ ಮಾಡಲಾಯಿತು. ಆದರೆ ಪ್ರಯತ್ನ ವಿಫಲವಾಯಿತು.

ಇದನ್ನೂ ನೋಡಿ:ಸರಿಸ್ಕಾ ಅರಣ್ಯದಲ್ಲಿ ಹೆಚ್ಚುತ್ತಿದೆ ವ್ಯಾಘ್ರಗಳ ಸಂಖ್ಯೆ.. ಒಂದೇ ಬಾರಿ 3 ಹುಲಿಗಳನ್ನ ನೋಡಿ ದಂಗಾದ ಪ್ರವಾಸಿಗರು!

ABOUT THE AUTHOR

...view details