ತುಮಕೂರು: ರಾತ್ರಿಯಾಗುತ್ತಿದ್ದಂತೆ ಗ್ರಾಮದೊಳಗೆ ನುಗ್ಗಿ ಅವಾಂತರ ಸೃಷ್ಟಿಸುತ್ತಿರುವ ಕರಡಿ.. ಜನರಲ್ಲಿ ಆತಂಕ - ತುಮಕೂರು ಕರಡಿ ದಾಳಿ
ತುಮಕೂರು :ರಾತ್ರಿಯಾಗುತ್ತಿದ್ದಂತೆ ಕರಡಿಯೊಂದು ಪ್ರತಿದಿನ ಗ್ರಾಮದೊಳಗೆ ನುಗ್ಗಿ ಅವಾಂತರ ಸೃಷ್ಟಿಸುತ್ತಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆ ಗ್ರಾಮದಲ್ಲಿ ನಡೆದಿದೆ. ಇದರಿಂದಾಗಿ ಮುಂಜಾನೆ ಹಾಗೂ ರಾತ್ರಿ ವೇಳೆ ರೈತರು ತಮ್ಮ ಹೋಲ-ಗದ್ದೆಗಳಿಗೆ ಹೋಗಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ದಿನ ಸಂಜೆ 7 ಗಂಟೆಗೆ ಜನವಸತಿ ಪ್ರದೇಶಗಳತ್ತ ಬರುವ ಕರಡಿಯನ್ನು ಕಂಡ ಸ್ಥಳೀಯರು ಆತಂಕಗೊಂಡಿದ್ದಾರೆ. ಅಲ್ಲದೆ, ಮನೆಯ ಪಕ್ಕದಲ್ಲಿರೋ ಬಾಳೆ, ಪರಂಗಿ, ಸೀಬೆ, ಕಡಲೆಕಾಯಿ ಕಿತ್ತು ಹಾಕುತ್ತಿದ್ದು, ಅನೇಕರು ನಷ್ಟ ಅನುಭವಿಸುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ತೋವಿನಕೆರೆ ಗ್ರಾಮಸ್ಥರು ತಮ್ಮ ಮಕ್ಕಳನ್ನು ಹೊರಗೆ ಕಳುಹಿಸಲು ಅಂಜುತ್ತಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಕರಡಿ ಕಾಟಕ್ಕೆ ಬೇಸತ್ತು ಹೋಗಿರುವ ಗ್ರಾಮಸ್ಥರು ಕೂಡಲೇ ಅದನ್ನು ಸೆರೆ ಹಿಡಿದು ದೂರದ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಆದ್ರೆ, ಇದುವರೆಗೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರಲ್ಲಿ ಆಸಮಾಧಾನ ಉಂಟುಮಾಡಿದೆ.
ಇದನ್ನೂ ಓದಿ :ಕಾರವಾರ... ಒಂದು ಕಡೆ ಕರಡಿ ದಾಳಿಗೆ ರೈತ ಬಲಿ: ಇನ್ನೊಂದೆಡೆ ಕಾರಿನ ಮೇಲೆ ಮರಬಿದ್ದು ಪವಾಡ ಸದೃಶ ರೀತಿಯಲ್ಲಿ ಇಬ್ಬರು ಪಾರು!