ಕರ್ನಾಟಕ

karnataka

ಕೃಷಿ ಸಚಿವ ಬಿ.ಸಿ ಪಾಟೀಲ್ ಮಾತನಾಡುತ್ತಿರುವುದು

ETV Bharat / videos

ನಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ನಿರ್ಧರಿಸಲು ಕುಮಾರಸ್ವಾಮಿ ಯಾರು?: ಬಿ.ಸಿ.ಪಾಟೀಲ್ - etv bharat kannada

By

Published : Feb 9, 2023, 7:23 PM IST

Updated : Feb 14, 2023, 11:34 AM IST

ಶಿರಸಿ(ಉತ್ತರ ಕನ್ನಡ):ನಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧಾರ ಮಾಡಲು ಕುಮಾರಸ್ವಾಮಿ ಯಾರು, ಬಿಜೆಪಿ ಬಗ್ಗೆ ಮಾತನಾಡಲು ಅವರಿಗೇನು ಹಕ್ಕಿದೆ? ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿರುಗೇಟು ನೀಡಿದರು. ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಯಾರು ಬೇಕಾದ್ರೂ ಮುಖ್ಯಮಂತ್ರಿ ಆಗಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಕ್ತಿಗೆ 25 ವರ್ಷ ಆಗಿರಬೇಕು. ಆತನಿಗೆ ತಲೆ ಸರಿ ಇರ್ಬೇಕು. ಚುನಾವಣೆಯಲ್ಲಿ ನಿಂತು ಗೆದ್ದು ಬರ್ಬೇಕು. ಮುಂದಿನ ಚುನಾವಣೆಯಲ್ಲಿ ನಾವು ಗೆದ್ದು ಬಂದ ಮೇಲೆ ಶಾಸಕಾಂಗ ಸಭೆಯಲ್ಲಿ ವರಿಷ್ಠರೊಂದಿಗೆ ಚರ್ಚಿಸಿ ಯಾರು ಮುಖ್ಯಮಂತ್ರಿ ಆಗಬೇಕು ಎಂಬುದನ್ನು ತೀರ್ಮಾನಿಸುತ್ತೇವೆ. ಕುಮಾರಸ್ವಾಮಿ ಅವರು ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಇಂತಹ ಬೇಜವಾಬ್ದಾರಿ ಹೇಳಿಕೆ ಕೊಡುವುದನ್ನು ಖಂಡಿಸುತ್ತೇನೆ" ಎಂದರು. 

ಇದನ್ನೂ ಓದಿ:ಹುಬ್ಬಳ್ಳಿ ಈದ್ಗಾ ಮೈದಾನ ವಿವಾದ ಬಿಜೆಪಿ ರಾಜಕೀಯ ಗಿಮಿಕ್: ಪ್ರಸಾದ್ ಅಬ್ಬಯ್ಯ

Last Updated : Feb 14, 2023, 11:34 AM IST

ABOUT THE AUTHOR

...view details