ಚಾಕುವಿನ ಹಿಡಿಕೆಯೊಳಗೆ ಅಡಗಿಸಿಟ್ಟು ಚಿನ್ನ ಸಾಗಣೆ, ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪ್ರಯಾಣಿಕ - ಸೊಂಟದ ಪಟ್ಟಿಯಲ್ಲಿ ಚಿನ್ನ ಸಾಗಣೆ
Published : Nov 25, 2023, 10:56 PM IST
ದೇವನಹಳ್ಳಿ(ಬೆಂಗಳೂರು):ಚಾಕುವಿನ ಹಿಡಿಕೆಯೊಳಗೆ ಟೊಳ್ಳಾದ ಜಾಗದಲ್ಲಿ ಚಿನ್ನವನ್ನು ಅಡಗಿಸಿಟ್ಟು ಅಕ್ರಮ ಸಾಗಣೆ ಮಾಡುತ್ತಿದ್ದ ದುಬೈನಿಂದ ಬಂದಿದ್ದ ಪ್ರಯಾಣಿಕನೊಬ್ಬನು ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ.
ದುಬೈನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 6E-1486 ವಿಮಾನದಲ್ಲಿ ಬಂದಿದ್ದ ಪ್ರಯಾಣಿಕನನ್ನು ಖಚಿತ ಮಾಹಿತಿ ಮೇರೆಗೆ ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದಾರೆ. ಈ ವೇಳೆ, ಚಾಕುವಿನ ಹಿಡಿಕೆಯೊಳಗೆ ಟೊಳ್ಳಾದ ಜಾಗದಲ್ಲಿ ಚಿನ್ನವನ್ನು ಅಡಗಿಸಿಟ್ಟಿರುವುದು ಕಂಡು ಬಂದಿದೆ.
ಪ್ರಯಾಣಿಕನನ್ನು ವಶಕ್ಕೆ ಪಡೆಯಲಾಗಿದ್ದು, 298.25 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಇದೇ ವಿಮಾನದಲ್ಲಿ ಮತ್ತೊಂದು ಪ್ರಕರಣದಲ್ಲಿ ಚಿನ್ನ ಲೇಪಿತ ಕಾಗದವನ್ನು ಟ್ರೇ ಮತ್ತು ಬೋರ್ಡ್ನಲ್ಲಿ ಮರೆಮಾಚಿ ಕಳ್ಳಸಾಗಣೆ ಮಾಡುತ್ತಿರುವ ಪ್ರಕರಣವೂ ಬೆಳಕಿಗೆ ಬಂದಿದೆ.
ಸೊಂಟದ ಪಟ್ಟಿಯಲ್ಲಿ ಚಿನ್ನ ಸಾಗಣೆ( ಬೆಂಗಳೂರು) :ಸೊಂಟದ ಪಟ್ಟಿಯಲ್ಲಿ ಮರೆಮಾಚಿ ಇನ್ಸೂಲೇಷನ್ ಟೇಪ್ನಲ್ಲಿ ಚಿನ್ನ ಸಾಗಿಸುತ್ತಿದ್ದ ಇಬ್ಬರು ಪ್ರಯಾಣಿಕರು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಕಳೆದ ಸೆಪ್ಟೆಂಬರ್ನಲ್ಲಿ ಸಿಕ್ಕಿಬಿದ್ದಿದ್ದರು. ಸೆಪ್ಟೆಂಬರ್ 9ರ ರಾತ್ರಿ ದುಬೈನಿಂದ ಇಕೆ564 ಎಮಿರೇಟ್ಸ್ ವಿಮಾನದಲ್ಲಿ ಬಂದಿಳಿದ ಈ ಪ್ರಯಾಣಿಕರನ್ನು ತಪಾಸಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಆರೋಪಿಗಳ ಬಗ್ಗೆ ಅನುಮಾನಗೊಂಡ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ 2.8 ಕೆಜಿ ಚಿನ್ನ ಪತ್ತೆಯಾಗಿದೆ. ಇದರ ಮೌಲ್ಯ 1.58 ಕೋಟಿ ರೂಪಾಯಿ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದರು.
ಇದನ್ನೂಓದಿ:ರಾಜಸ್ಥಾನದಲ್ಲಿ ಝಣ ಝಣ ಕಾಂಚಾಣ: 690 ಕೋಟಿ ರೂಪಾಯಿ ನಗದು, ಮದ್ಯ, ಡ್ರಗ್ಸ್ ವಶ